ಸಿದ್ದಾಪುರ: ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಜ್ಯೋತಿನಗರದ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ೧೦ನೇ ವರ್ಷದ ಗೌರಿಗಣೇಶ ವಿಸರ್ಜನೋತ್ಸವವನ್ನು ಸೌಹಾರ್ದತೆಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ವಿಸರ್ಜನೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅನ್ನದಾನ ಏರ್ಪಡಿಸಲಾಗಿತ್ತು. ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯಮೇಳದೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಗೌರಿ-ಗಣೇಶ ಮೂರ್ತಿ ಯನ್ನು ವಿಸರ್ಜಿಸಲಾಯಿತು. ಈ ಸಂದರ್ಭ ಗ್ರಾಮದ ಮುಸ್ಲಿಂ ಯುವಕರು ಮೆರವಣಿಗೆಯಲ್ಲಿ ತೆರಳುತ್ತಿದ್ದವರಿಗೆ ಕಾಫಿ, ಪಾನಕಗಳನ್ನು ವಿತರಿಸಿ ಸೌಹಾರ್ದತೆ ಮೆರೆದರು. ಈ ಸಂದರ್ಭ ಶ್ರೀ ವಿನಾಯಕ ಮಿತ್ರ ಮಂಡಳಿ ಪ್ರಮುಖರಾದ ಪ್ರಭು, ಅಶೋಕ್, ದರ್ಶನ್, ಅಶ್ರಫ್, ನೌಫಲ್, ಸಮೀರ್ ಇನ್ನಿತರರು ಹಾಜರಿದ್ದರು.
ಗುಡ್ಡೆಹೊಸೂರು: ಗುಡ್ಡೆಹೊಸೂರಿನ ವಿವಿಧೆಡೆ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಸಂಭ್ರಮ-ಸಡಗರದಿAದ ನಡೆಯಿತು.
ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ನಡೆದ ೩೦ನೇ ವರ್ಷದ ಗಣೇಶೋತ್ಸವ ಹಾಗೂ ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಒಂದೇ ದಿನ ನಡೆಯಿತು. ಉಭಯ ಸಮಿತಿಗಳ ಮೆರವಣಿಗೆ ಪಟ್ಟಣದಲ್ಲಿ ಸಾಗಿಬಂದವು. ಸ್ಥಳೀಯರು ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದರು. ಸಿಡಿಮದ್ದು ಪ್ರದರ್ಶನ ಆಕರ್ಷಣೆ ಮೂಡಿಸಿತು. ನಂತರ ಕಾವೇರಿ ನದಿಯಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ಗುಡ್ಡೆಹೊಸೂರು ಸುತ್ತಮುತ್ತಲಿನ ಬಸವನಹಳ್ಳಿ, ಬೆಟ್ಟಗೇರಿ, ಮಾದಪಟ್ಟಣ, ಅತ್ತೂರು, ಬಾಳು ಗೋಡು ಭಾಗದಲ್ಲಿಯೂ ವಿಸರ್ಜನೋತ್ಸವ ಅದ್ದೂರಿಯಾಗಿ ನೆರವೇರಿತು. ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ಗಣೇಶೋತ್ಸವ ಸಮಿತಿ ವತಿಯಿಂದ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರಿಂದ ಮತ್ತು ಮಕ್ಕಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯಿತು. ಗ್ರಾಮದ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪೊನ್ನಂಪೇಟೆ: ಪೊನ್ನಂ ಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಹೊನ್ನಿಕೊಪ್ಪ ಲಿನ ಶ್ರೀ ವಿನಾಯಕ ಬಳ ಗದ ವತಿಯಿಂದ ಕನ್ನಂ ಬಾಡಿಯಮ್ಮ ದೇವಸ್ಥಾನ ದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೩೪ನೇ ವರ್ಷದ ಶ್ರೀ ಗೌರಿ ಗಣೇಶ ಮೂರ್ತಿ ವಿಸರ್ಜ ನೋತ್ಸವ ನಡೆಯಿತು.
ಶ್ರೀ ಕನ್ನಂಬಾಡಿಯಮ್ಮ ದೇವಸ್ಥಾನದ ಆರ್ಚಕರಾದ ಅಪ್ಪಣ್ಣ, ಕೀರ್ತನ್ ಹಾಗೂ ರಾಜು ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ಗಳು ನಡೆದವು. ಶ್ರೀ ವಿನಾಯಕ ಬಳಗದ ಅಧ್ಯಕ್ಷ ಅಭಿಷೇಕ್ ಅವರ ಮುಂದಾಳತ್ವದಲ್ಲಿ ವಿದ್ಯುತ್ ದೀಪಾ ಲಂಕೃತ ಮಂಟಪದಲ್ಲಿ ಗೌರಿ, ಗಣೇಶ ಮೂರ್ತಿ ಯನ್ನು ಪ್ರತಿಷ್ಠಾಪಿಸಿ ಗ್ರಾಮದಲ್ಲಿ ಡಿಜೆ ಹಾಗೂ ಸಿಡಿಮದ್ದು ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಲಾಯಿತು. ಹೊನ್ನಿಕೊಪ್ಪಲು ಮುಖ್ಯರಸ್ತೆ ಯಲ್ಲಿ ಸಾಗಿ ಶ್ರೀ ಮಹದೇಶ್ವರ ದೇವಸ್ಥಾನದ ರಸ್ತೆ ಹಾಗೂ ಕುಟ್ಟೀಚಾತ ದೇವರ ರಸ್ತೆವರೆಗೆ ಮೆರವಣಿಗೆ ಸಾಗಿ, ಹೊನಿಕೊಪ್ಪಲಿನ ಕೀರೆಹೊಳೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಶ್ರೀ ವಿನಾಯಕ ಬಳಗದ ಉಪಾಧ್ಯಕ್ಷ ಹೆಚ್ ಆರ್ ಹರೀಶ್, ರತೀಶ್, ಪುನೀತ್, ರಂಗಸ್ವಾಮಿ, ಸಿದ್ದೇಶ್, ಕೀರ್ತನ್, ಪ್ರಜ್ವಲ್, ರಾಕೇಶ್, ಪ್ರಸಾದ್, ಹರೀಶ್, ಹೆಚ್.ಡಿ ದರ್ಶಿನಿ, ಶ್ರೀ ವಿನಾಯಕ ಬಳಗದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.ಚೆಟ್ಟಳ್ಳಿ: ಇಲ್ಲಿನ ವೀರಾಂಜ ನೇಯ ಯುವಕ ಸಂಘದ ವತಿಯಿಂದ ೧೦ನೇ ವರ್ಷದ ಗೌರಿ- ಗಣೇಶೋತ್ಸವ ನಡೆಯಿತು.
ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಸಂಜೆ ಅಲಂ ಕೃತ ಮಂಟಪದ ವಾದ್ಯಗೋಷ್ಟಿ ಮೆರವಣಿಗೆಯೊಂದಿಗೆ ಭೂತನ ಕಾಡು ಹೊಳೆಯಲ್ಲಿ ವಿಸರ್ಜನೆ ನೆರವೇರಿತು.
ಮಡಿಕೇರಿ: ನೆಲ್ಯಹುದಿಕೇರಿಯ ನಾಲ್ಕನೇ ವಿಭಾಗದ ಶ್ರೀ ಸಿದ್ಧಿವಿನಾಯಕ ಮಿತ್ರ ಮಂಡಳಿ ವತಿಯಿಂದ ಗೌರಿ ಗಣೇಶ ಉತ್ಸವದ ಸಂದರ್ಭದಲ್ಲಿ ಉರಗ ತಜ್ಞ ನೌಫಲ್ ಅವರ ಸೇವೆಯನ್ನ ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ಧಿವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಜರಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಸಾಂಸ್ಕೃತಿಕ ವೇದಿಕೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಗಣಪತಿ ವಿಗ್ರಹವನ್ನು ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಹಾರಂಗಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಸಿ.ಸಿ. ಸ್ವಾಮಿ ಸೇರಿದಂತೆ ಸಮಿತಿಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.