ಸುಂಟಿಕೊಪ್ಪ: ಸಂತ ಮೇರಿ ಆಂಗ್ಲ ವಿದ್ಯಾಸಂಸ್ಥೆಯ ಪ್ರೌಢಶಾಲಾ ಬಾಲಕರ ವಿಭಾಗೀಯ ಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದು, ದಕ್ಷಿಣ ಕನ್ನಡದ ಬಜ್ಪೆಯಲ್ಲಿ ನಡೆಯಲಿರುವ ಪಂದ್ಯಾವಳಿಗೆ ಆಡಲು ಅರ್ಹತೆಗಳಿಸಿಕೊಂಡಿದ್ದಾರೆ.
ಬಾಲಕರ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು ಅಲ್ಲಿ ಗೆಲುವು ಪಡೆದು ತಾ. ೧೨ ರಿಂದ ದಕ್ಷಿಣ ಕನ್ನಡದಲ್ಲಿ ಆರಂಭಗೊಳ್ಳಲಿರುವ ಪಂದ್ಯಾವಳಿಗೆ ಪ್ರೌಢಶಾಲಾ ಬಾಲಕರು ತೆರಳಲಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಸುನಿಲ್, ಶ್ರುತಿ, ಚಂದ್ರಶೇಖರ್ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ.ಚೆಟ್ಟಳ್ಳಿ: ಮಡಿಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡ, ಬಾಲಕರ ಫುಟ್ಬಾಲ್ ಮತ್ತು ಬಾಲಕಿಯರ ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನಗಳಿಸಿ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಫೈನಲ್ ಪಂದ್ಯದಲ್ಲಿ ಮಡಿಕೇರಿಯ ಸ.ಮಾ.ಪ್ರಾ. ಶಾಲಾ ಬಾಲಕರ ತಂಡವನ್ನು ಮಣಿಸಿ ಚೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಗೆಲುವು ಸಾಧಿಸಿದರು. ಥ್ರೋಬಾಲ್ ಫೈನಲ್ ಪಂದ್ಯದಲ್ಲಿ ಸಂತ ಮೈಕಲರ ಶಾಲಾ ಬಾಲಕಿಯರು ತಂಡವನ್ನು ಮಣಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ಈ ಸಂದರ್ಭ ಚೆಟ್ಟಳ್ಳಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ, ಸಹ ಶಿಕ್ಷಕರಾದ ಅಶೋಕ, ರಸೀನ ಮತ್ತು ಶಾಂಭವಿ ಇದ್ದರು.ಬಾಲಕಿಯರ ಖೋ-ಖೋ ವಿಭಾಗ ಮತ್ತು ಬಾಲಕಿಯರ ಥ್ರೋಬಾಲ್ ನಲ್ಲಿ ಪ್ರಥಮ, ಬಾಲಕರ ಕಬಡ್ಡಿ, ಬಾಲಕಿಯರ ವಾಲಿಬಾಲ್ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಮೇಲಾಟದ ಬಾಲಕರ ಶಾಟ್ಫುಟ್ನಲ್ಲಿ ಪಿ.ಜೆ. ಸಿದ್ದು ಪ್ರಥಮ, ೨೦೦ ಮೀಟರ್ ಓಟದಲ್ಲಿ ಪಿ.ಕೆ. ಮಂAಜು ಪ್ರಥಮ, ೪೦೦ ಮೀ. ಓಟದಲ್ಲಿ ವೈ.ಈ. ಅಪ್ಪು ದ್ವಿತೀಯ, ಬಾಲಕರ ಮತ್ತು ಬಾಲಕಿಯರ ೪x೪೦೦ ರಿಲೇಯಲ್ಲಿ ದ್ವಿತೀಯ, ಗುಂಡು ಎಸೆತದಲ್ಲಿ ವೈ.ಬಿ. ಕಾವ್ಯ ದ್ವಿತೀಯ, ತೇಜಸ್ವಿನಿ ೪೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಸಾಧನೆ ಮಾಡಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಎಂ.ಬಿ. ಮೀರಾ ತರಬೇತಿ ನೀಡಿದ್ದರು. ನಾಪೋಕ್ಲು: ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಚೇರಂಬಾಣೆಯ ಕೊಟ್ಟೂರು ಶ್ರೀ ರಾಜರಾಜೇಶ್ವರಿ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.
ಬಾಲಕರ ವಿಭಾಗದ ಕಾಲ್ಚೆಂಡು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕ ಮತ್ತು ಬಾಲಕಿಯರ ವಿಭಾಗದ ಥ್ರೋಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಶಟಲ್ ಬ್ಯಾಡ್ಮಿಂಟನ್ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಬಾಲಕ, ಬಾಲಕಿಯರು ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ಬಾಲಕರ ವಿಭಾಗ ಪ್ರಥಮ ಸ್ಥಾನ, ಭಾರದ ಗುಂಡು ಎಸೆತ ಬಾಲಕರ ಹಾಗೂ ಬಾಲಕಿಯರು ದ್ವಿತೀಯ ಸ್ಥಾನ, ಜಾವಲಿನ್ ಎಸೆತದಲ್ಲಿ ಬಾಲಕಿಯರು ದ್ವಿತೀಯ ಸ್ಥಾನ, ೧೦೦x೪ ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ, ೪x೪೦೦ ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ, ೧೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಬಾಲಕರು ಪ್ರಥಮ, ೨೦೦ ಮೀಟರ್ ಓಟದಲ್ಲಿ ಬಾಲಕರು ಪ್ರಥಮ, ೧,೫೦೦ ಮೀಟರ್ ಓಟದಲ್ಲಿ ಬಾಲಕರು ತೃತೀಯ, ತಟ್ಟೆ ಎಸೆತದಲ್ಲಿ ಬಾಲಕರು ಹಾಗೂ ಬಾಲಕಿಯರು ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರವಂಡ ಸೀಮಾ ಗಣಪತಿ, ತರಬೇತುದಾರರಾಗಿ ಕುದುಪಜೆ ಕವನ್ ಕುಮಾರ್, ಮನೋಜ್ ಕುಮಾರ್ ಜೆ.ಆರ್. ಕಾರ್ಯನಿರ್ವಹಿಸಿದ್ದಾರೆ.ಕಡಂಗ: ಸ್ಥಳೀಯ ಸ.ಹಿ. ಪ್ರಾ.ಶಾಲೆ, ಕಡಂಗದ ವಿದ್ಯಾರ್ಥಿಗಳು ನಾಪೋಕ್ಲಿನಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ರಿಲೇ ಪ್ರಥಮ, ಡಿಸ್ಕಸ್ ಥ್ರೋ ಪ್ರಥಮ, ಶಾಟ್ಪುಟ್ ದ್ವಿತೀಯ, ೧೦೦ ಮೀ ಓಟ ಪ್ರಥಮ ಸ್ಥಾನದೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾ ತರಬೇತುದಾರರಾಗಿ ದೈಹಿಕ ಶಿಕ್ಷಣ ಶಿಕ್ಷಕಿ ಶೋಭ ಎಂ.ಬಿ. ಭಾಗವಹಿಸಿದ್ದಾರೆ.
ಶನಿವಾರಸಂತೆ: ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಆಲೂರು ಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ೨೦೨೪-೨೫ ನೇ ಸಾಲಿನ ಶನಿವಾರಸಂತೆ ವಲಯಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಸಚಿತ್, ಹಸೇನ್, ಹುಸೇನ್, ಲೋಹಿತ್, ಅರ್ ಬಾಜ್, ರೋಹಿತ್, ಪ್ರೀತಮ್ ಆದರ್ಶ ಮತ್ತು ರಿಹಾನ್ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಅಜ್ಲಾಜ್, ಶ್ರೀಕಾಂತ್, ಸಿದ್ಧಾರ್ಥ ಸಿಂಗ್, ಆರ್ಯನ್ ಸಿಂಗ್, ಕಾರ್ತಿಕ್, ಸಯ್ಯದ್ ರಝಾಕ್, ಕಿಶೋರ್ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.ನಾಪೋಕ್ಲು: ಇಲ್ಲಿಗೆ ಸಮೀಪದ ಭಾಗಮಂಡಲ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ (ಎಇಒS) ವಿದ್ಯಾರ್ಥಿಗಳು ನಾಪೋಕ್ಲು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಾಥಮಿಕ ಶಾಲಾ ಹಂತದ ವಿಭಾಗದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ಚೆಸ್ ಪಂದ್ಯಾಟದಲ್ಲಿ ಶಾಲೆಯ ಬೃಂದಾ ಎ.ಎನ್., ಬಿನೀಷ್ ಕೆ.ಆರ್., ಚಿರಾಗ್ ಚಂಗಪ್ಪ ಎ.ಎನ್., ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಭಾಗಮಂಡಲ ಕಾವೇರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ಹಂತದಲ್ಲಿ ಬಾಲಕರು ಹಾಕಿಯಲ್ಲಿ ಪ್ರಥಮ, ಹ್ಯಾಂಡ್ ಬಾಲ್ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಖೋ-ಖೋದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚೆಸ್ ಪಂದ್ಯಾಟದಲ್ಲಿ ಶಿರಿನ್ ಸೀತಮ್ಮ, ಶ್ರೀಶ, ಸ್ಪಂದನ ವೈ.ಎಸ್., ನಿಧಿ ಕೆ.ಪಿ. ಮತ್ತು ಬಾಲಕರಲ್ಲಿ ಕುಶಾಲಪ್ಪ ಬಿ.ಯು. ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಶಟಲ್ ಬ್ಯಾಡ್ಮಿಂಟನ್ನಲ್ಲಿ ಬಾಲಕರು ಮತ್ತು ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಥ್ಲೆಟಿಕ್ಸ್ : ಬಾಲಕಿಯರ ವಿಭಾಗದಲ್ಲಿ ೪೦೦ ಮೀಟರ್ನಲ್ಲಿ - ಯಶಿಕ ಪ್ರಥಮ, ೧೫೦೦ ಮೀಟರ್ನಲ್ಲಿ - ನಿಧಿ ಕೆ.ಪಿ. ಪ್ರಥಮ, ೧೦೦ ಮೀಟರ್ನಲ್ಲಿ - ಯಶಿಕ ಪ್ರಥಮ.
ಶಾಟ್ಪುಟ್ನಲ್ಲಿ ವಫಾ - ಪ್ರಥಮ, ಓಂಶ್ರೀ - ಪ್ರಥಮ ಸ್ಥಾನ ಗಳಿಸಿದ್ದಾರೆ.
೪೦೦ ಮೀಟರ್ ಓಟದಲ್ಲಿ ನೀತು ದ್ವಿತೀಯ, ೮೦೦ ಮೀಟರ್ ಓಟದಲ್ಲಿ ಸಾನಿಯಾ ದ್ವಿತೀಯ ಸ್ಥಾನ ಗಳಿಸಿದರು.
ಡಿಸ್ಕಸ್ ಥ್ರೋನಲ್ಲಿ ಸಹನ - ದ್ವಿತೀಯ, ಭರ್ಜಿ ಎಸೆತ (ರಿಚಿveಟiಟಿ ಣhಡಿoತಿ)ನಲ್ಲಿ ಹಿಬ - ತೃತೀಯ ಸ್ಥಾನ ಗಳಿಸಿದರು.
ಬಾಲಕರ ವಿಭಾಗದಲ್ಲಿ ೨೦೦ ಮೀಟರ್ ಓಟದಲ್ಲಿ ಶಮ್ಮಸ್ ದ್ವಿತೀಯ ಸ್ಥಾನ ಪಡೆದುಕೊಂಡರು.
ಭರ್ಜಿ ಎಸೆತ (ರಿಚಿveಟiಟಿ ಣhಡಿoತಿ)ನಲ್ಲಿ ಮಾನ್ವಿತ್ - ದ್ವಿತೀಯ
ಉದ್ದ ಜಿಗಿತ ಬಾಲಕರ ವಿಭಾಗದಲ್ಲಿ ಮಾನ್ವಿತ್ -ತೃತೀಯ, ಬಾಲಕಿಯರ ವಿಭಾಗದಲ್ಲಿ ಯಶಿಕ - ಪ್ರಥಮ ಸ್ಥಾನವನ್ನು ಗಳಿಸಿದರು.
ಎತ್ತರ ಜಿಗಿತ ಬಾಲಕಿಯರ ವಿಭಾಗದಲ್ಲಿ ನಿಧಿ - ದ್ವಿತೀಯ, ಲಕ್ಷಿತಾ - ತೃತೀಯ.
ಟ್ರಿಪ್ಪಲ್ ಜಂಪ್ ಬಾಲಕರ ವಿಭಾಗದಲ್ಲಿ ಯಶಿಕ್ - ತೃತೀಯ, ಬಾಲಕಿಯರ ವಿಭಾಗದಲ್ಲಿ ನಿಧಿ - ತೃತೀಯ ಸ್ಥಾನ ಪಡೆದಿದ್ದಾರೆ.ಸಿದ್ದಾಪುರ: ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮೂರ್ನಾಡು ಪ್ರಾಥಮಿಕ ಶಾಲೆಯ ತಂಡವನ್ನು ಮಣಿಸಿ ಮಂಗಳೂರಿನ ಮಲ್ಪೆಯಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೂರ್ನಾಡು
ಮೂರ್ನಾಡು: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕೋಡಂಬೂರಿನ ಜ್ಞಾನಜ್ಯೋತಿ ಎಜುಕೇಷನ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಮಡಿಕೇರಿ ತಾಲೂಕುಮಟ್ಟದ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟವು ಮೂರ್ನಾಡು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜರುಗಿತು.
ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟ ಸಮಾರಂಭವನ್ನು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ ಗಿಡಕ್ಕೆ ನೀರು ಹಾಕಿ, ಪಾರಿವಾಳವನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿ ಎಲ್ಲಾ ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವ ಮತ್ತು ಶಿಸ್ತು ಇರಬೇಕು ಎಂದು ಹೇಳಿದರು. ಜ್ಞಾನಜ್ಯೋತಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಕ್ರೀಡಾ ಧ್ವಜಾರೋಹಣ ನೇರವೇರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೊ ಕೀಡೆಯು ಅಷ್ಟೇ ಮುಖ್ಯವಾಗಿದೆ ಎಂದರು.
ವೇದಿಕೆಯಲ್ಲಿ ಜ್ಞಾನಜ್ಯೋತಿ ಎಜುಕೇಷನ್ ಸೊಸೈಟಿಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶೀಲಾ ಅಬ್ದುಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ.ಸಿ. ದೊಡ್ಡೇಗೌಡ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಬಿ.ಆರ್. ಗಾಯಿತ್ರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ಮಡಿಕೇರಿ ತಾಲೂಕಿನ ಅಧ್ಯಕ್ಷ ಬಿ.ಟಿ. ಪೂರ್ಣೇಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ್ ಪೆರಾಜೆ, ಮಡಿಕೇರಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜಿ. ಅಶೋಕ್, ಸರ್ಕಾರಿ ಪ್ರೌಢಶಾಲಾ ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಮಡಿಕೇರಿ ತಾಲೂಕು ಸಂಘದ ಅಧ್ಯಕ್ಷ ಪಿ.ಎಂ. ಕಿರಣ್, ಮಡಿಕೇರಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಪಿ. ಗುರುರಾಜ್, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಬೆಲ್ಲು ಚಿಣ್ಣಪ್ಪ, ಕಾರ್ಯದರ್ಶಿ ಬಡುವಂಡ ಬೋಪಣ್ಣ, ಖಜಾಂಚಿ ಎನ್.ಒ. ಮ್ಯಾಥ್ಯು, ನಿರ್ದೇಶಕರಾದ ಮಾಳೇಟಿರ ನವೀನ್ ಕಾರ್ಯಪ್ಪ, ಡಾ. ಜೆ.ಎ. ಕುಂಞ ಅಬ್ದುಲ್ಲಾ, ಬಡುವಂಡ ವಿಜಯ, ಅವರೆಮಾದಂಡ ಸುಗುಣ ಸುಬ್ಬಯ್ಯ ಮತ್ತು ಶಾಲಾ ಮುಖ್ಯ ಶಿಕ್ಷಕಿ ಶಿಲ್ಪ ಪೊನ್ನಮ್ಮ ಉಪಸ್ಥಿತರಿದ್ದರು. ಸಮಾರಂಭದ ಮೊದಲು ಮೂರ್ನಾಡು, ಮಡಿಕೇರಿ, ನಾಪ್ಲೋಕು ಮತ್ತು ಭಾಗಮಂಡಲ ವಲಯದ ಕ್ರೀಡಾಪಟುಗಳಿಂದ ಪಥಸಂಚಲನ ವೀಕ್ಷಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ.ಸಿ. ದೊಡ್ಡೇಗೌಡ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಬಿ.ಆರ್. ಗಾಯತ್ರಿ ಗೌರವ ವಂದನೆ ಸ್ವೀಕರಿಸಿದರು. ನಾಲ್ಕು ವಲಯದ ಕ್ರೀಡಾಪಟುಗಳು ವಿವಿಧ ಮೇಲಾಟಗಳಲ್ಲಿ ಪಾಲ್ಗೊಂಡು ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು. ಜ್ಞಾನಜ್ಯೋತಿ ಶಾಲಾ ಶಿಕ್ಷಕಿ ಬಿ.ಎನ್. ಕವಿತ ಕಾರ್ಯಕ್ರಮ ನಿರೂಪಿಸಿ, ಡಾ. ಬಿ.ಸಿ. ದೊಡ್ಡೇಗೌಡ ಸ್ವಾಗತಿಸಿ, ಕೆ.ಬಿ ಅಶೋಕ್ ವಂದಿಸಿದರು.ಮಡಿಕೇರಿ: ಶೈಕ್ಷಣಿಕ ವರ್ಷ ೨೦೨೪-೨೫ರ ಸಾಲಿನ ವಲಯ ಮಟ್ಟದ ಕ್ರೀಡಾಕೂಟದ ಆಯೋಜಕತ್ವವನ್ನು ವಹಿಸಿದಂತಹ ಕಾವೇರಿ ಶಾಲೆಯ ಆಡಳಿತ ಮಂಡಳಿ ವತಿಯಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಅಮ್ಮತ್ತಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿಸಲಾಯಿತು.
ಮುಖ್ಯ ಅತಿಥಿಗಳಾದ ಕಾವೇರಿ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ, ಹಾಗೂ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಗಾಲ್ಫ್ ಕ್ರೀಡೆಯ ತೀರ್ಪುಗಾರರಾದ ಕಾವೇರಿ ಮುತ್ತಣ್ಣ ಅವರು ಕ್ರೀಡಾ ಧ್ವ್ವಜಾರೋಹಣ ನೆರವೇರಿಸಿಕೊಟ್ಟರು.
ಕಾವೇರಿ ಮುತ್ತಣ್ಣ ಅವರು “ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು” ಎಂಬ ಬಗ್ಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಮ್ಮತ್ತಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರುಕ್ಮಿಣಿ, ಪ್ರವೀಣ್ ವೀರಾಜಪೇಟೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದಂತಹ ಸುಷಾ, ಪಾಲಿಬೆಟ್ಟ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಕರುಂಬಯ್ಯ, ಅಮ್ಮತ್ತಿ, ಸರಕಾರಿ ಮಾದರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ದೊಡ್ಡ ತಮ್ಮಯ್ಯ, ಅಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೋಮಕ್ಕ ಎಚ್.ಎಸ್, ಕಾವೇರಿ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್, ಕಾರ್ಯದರ್ಶಿ ವಿನೋದ್ ಪಿ.ಎನ್, ಕಾವೇರಿ ಶಾಲೆಯ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ ಬಿ.ಎಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು, ಅಮ್ಮತ್ತಿ ವಲಯಮಟ್ಟದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕಾವೇರಿ ಶಾಲೆಯ ಸಹಶಿಕ್ಷಕರು ಉಪಸ್ಥಿತರಿದ್ದರು.
ಕಾವೇರಿ ಶಾಲೆಯ, ೧೦ನೇ ತರಗತಿಯ ವಿದ್ಯಾರ್ಥಿ ನಿಶಾನ್ ಎಂ.ಎನ್. ಸ್ವಾಗತಿಸಿ, ಕಾವೇರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುದೇಶ್ ಬಿ.ಎಸ್ ವಂದಿಸಿದರು.
ಕಾರ್ಯಕ್ರಮವನ್ನು ಕಾವೇರಿ ಶಾಲೆಯ ಸಹ ಶಿಕ್ಷಕಿಯರಾದ ಕಲ್ಪ ಟಿ.ಜಿ ಹಾಗೂ ಮಿಸ್ಬಾ ಫಾತಿಮಾ ನಿರೂಪಿಸಿದರು.ಐಗೂರು: ಇತ್ತೀಚೆಗೆ ಕೂಡಿಗೆಯ ಕ್ರೀಡಾಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಐಗೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಂಡರು.
ಬಾಲಕರ ವಿಭಾಗದಲ್ಲಿ ೪೦೦ ಮೀಟರ್ ಓಟದಲ್ಲಿ ಡಿಕಾಸ್ ಪ್ರಥಮ ಸ್ಥಾನ, ಡಿಸ್ಕಸ್ ತ್ರೋ ಜೀವನ್ ಪಿ.ಎಸ್. ಪ್ರಥಮ ಸ್ಥಾನ, ಜಾವೆಲಿನ್ ಥ್ರೋ ಅಕ್ಷಯ್ ಪ್ರಥಮ ಸ್ಥಾನ, ೪x೧೦೦ ಮೀಟರ್ ರಿಲೇ ಬಾಲಕರು ಪ್ರಥಮ ಸ್ಥಾನ, ೪೦೦x೪೦೦ ಮೀಟರ್ ರಿಲೇ ಬಾಲಕರು ದ್ವಿತೀಯ ಸ್ಥಾನ, ೧೦೦ ಮೀಟರ್ ಓಟ ನಿತಿನ್ ದ್ವಿತೀಯ ಸ್ಥಾನ, ಹೈ ಜಂಪ್ ಮತ್ತು ೨೦೦ ಮೀಟರ್ ಓಟ ಡಿಕಾಸ್ ದ್ವಿತೀಯ ಸ್ಥಾನ, ಶಾಟ್ ಪುಟ್ ಜೀವನ್ ಮೂರನೇ ಸ್ಥಾನ ಮತ್ತು ಟ್ರಿಪಲ್ ಜಂಪಿನಲ್ಲಿ ನಿಶಾಂತ್ ಮೂರನೇ ಸ್ಥಾನ, ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಶಾಟ್ ಪುಟ್ ಮತ್ತು ಜಾವೆಲಿನ್ ಥ್ರೋದಲ್ಲಿ ಭವಿಷ್ಯ ಪ್ರಥಮ ಸ್ಥಾನ, ಡಿಸ್ಕಸ್ ತ್ರೋ ದೀಕ್ಷಿತ ದ್ವಿತೀಯ ಸ್ಥಾನ, ಟ್ರಿಪಲ್ ಜಂಪಿನಲ್ಲಿ ಅಕ್ಷತಾ ದ್ವಿತೀಯ ಸ್ಥಾನ, ಟ್ರಿಪಲ್ ಜಂಪ್ನಲ್ಲಿ ಉಸ್ನಬಾನು ತೃತೀಯ ಸ್ಥಾನ ಪಡೆದುಕೊಂಡರು.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಮತ್ತು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳು ಕೂಡಿಗೆಯಲ್ಲಿ ಮುಂದಿನ ಬಾರಿ ನಡೆಯುವ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ತಂಡದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹೆಚ್.ಬಿ. ಕೃಷ್ಣಪ್ಪ, ತಂಡದ ವ್ಯವಸ್ಥಾಪಕ ಶಿ. ಮಂಜುನಾಥ್ ಮತ್ತು ಶಿ. ರೇಖಾ ಕಾರ್ಯ ನಿರ್ವಹಿಸಿದರು. ಸೋಮವಾರಪೇಟೆ: ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಹೇಳಿದರು.
ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಮೈದಾನದಲ್ಲಿ ಆಯೋಜಿಸಿದ್ದ ಎ. ವಲಯಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಕ್ರೀಡೆಗೆ ಕೊಡಗಿನಲ್ಲಿ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.
ಕ್ರೀಡಾ ಧ್ವಜಾರೋಹಣವನ್ನು ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ ನೆರವೇರಿಸಿದರು. ಶಾಲೆಯ ಕ್ರೀಡಾ ನಾಯಕಿ ಎಚ್.ಆರ್.ದಿಶಿತಾ ಕ್ರೀಡಾಜ್ಯೋತಿ ತಂದರು. ವಿವಿಧ ಶಾಲೆಯ ಕ್ರೀಡಾಪಟುಗಳಿಂದ ಧ್ವಜ ವಂದನೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ಸಂಘದ ನಿರ್ದೇಶಕರುಗಳಾದ ರಾಮಚಂದ್ರ, ನಂದಕುಮಾರ್, ಬಗ್ಗನ ಅನಿಲ್, ಶ್ರೀಹರಿ, ಕೆ.ಟಿ.ಪರಮೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರತ್ನಕುಮಾರ್, ಸಿಆರ್ಪಿ ಪ್ರೇಮಾ, ಮುಖ್ಯ ಶಿಕ್ಷಕಿ ಮಿಲ್ಡೆçಡ್ ಗೊನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಇಂದಿರಾ, ಎಚ್.ಈ. ಬಸವರಾಜ್ ಇದ್ದರು. ಶಾಲಾ ನಾಯಕಿ ಪಂಚಮಿ, ವಿದ್ಯಾರ್ಥಿನಿಯರಾದ ನಮನ, ರೇಚಾನ ಕಾರ್ಯಕ್ರಮ ನಿರ್ವಹಿಸಿದರು.
ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು