ಚೆಯ್ಯಂಡಾಣೆ, ಸೆ. ೧೪: ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ನರಿಯಂದಡ, ಅರಪಟ್ಟು ಗ್ರಾಮದ ಬ್ಲಾಕ್ (೧)ಹಾಗೂ (೨), ಕರಡ,ಕೊಕೇರಿ,ಚೇಲಾವರ, ಗ್ರಾಮಗಳ ವಾರ್ಡ್ ಸಭೆಯನ್ನು ಆಯಾಯ ವಾರ್ಡ್ನ ಸದಸ್ಯರ ಅಧ್ಯಕ್ಷತೆಯಲ್ಲಿ ತಾ. ೧೮. ರಿಂದ ೨೦ ವರೆಗೆ ನಡೆಯಲಿದೆ.
ತಾ. ೧೮ರಂದು ಬೆಳಿಗ್ಗೆ ೧೧ ಗಂಟೆಗೆ ನರಿಯಂದಡ ಬ್ಲಾಕ್ (೧)ರ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯೆ ಪುಷ್ಪ ಬಿ.ಎಸ್. ಅಧ್ಯಕ್ಷತೆಯಲ್ಲಿ,ಅಪರಾಹ್ನ ೨.೩೦ ಗಂಟೆಗೆ ನರಿಯಂದಡ ಬ್ಲಾಕ್ (೨)ರ ವಾರ್ಡ್ ಸಭೆ ಸ.ಹಿ.ಪ್ರಾ. ಶಾಲೆ ಎಡಪಾಲದಲ್ಲಿ ಗ್ರಾ.ಪಂ. ಸದಸ್ಯೆ ರಜೀನ ವೈ.ಆರ್. ಅಧ್ಯಕ್ಷತೆಯಲ್ಲಿ, ತಾ. ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಅರಪಟ್ಟು ಬ್ಲಾಕ್ ೧ ಹಾಗೂ ೨ ರ ವಾರ್ಡ್ ಸಭೆ ಸ.ಹಿ.ಪ್ರಾ.ಶಾಲೆ ಕಡಂಗದಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಅಧ್ಯಕ್ಷತೆಯಲ್ಲಿ, ಅಪರಾಹ್ನ ೧೨ ಗಂಟೆಗೆ ಕರಡ ಗ್ರಾಮದ ವಾರ್ಡ್ ಸಭೆ ಸ.ಹಿ.ಪ್ರಾ ಶಾಲೆ ಕರಡದಲ್ಲಿ ಗ್ರಾ.ಪಂ ಸದಸ್ಯರಾದ ವಿಲಿನ್ ಬೇಪಡಿಯಂಡ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ:೨೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಚೇಲಾವರ ವಾರ್ಡ್ ಸಭೆ ಸ.ಕಿ.ಪ್ರಾ.ಶಾಲೆ ಪೊನ್ನೋಲ ಚೇಲಾವರದಲ್ಲಿ ಗ್ರಾ.ಪಂ. ಸದಸ್ಯರಾದ ಮುಂಡಿಯೋಳAಡ ಈರಪ್ಪ ಅಧ್ಯಕ್ಷತೆಯಲ್ಲಿ ಅಪರಾಹ್ನ ೨.೩೦ ಗಂಟೆಗೆ ಕೊಕೇರಿ ವಾರ್ಡ್ ಸಭೆ ಮಹಿಳಾ ಸಮಾಜ ಕಟ್ಟಡ ಕೊಕೇರಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ.