ವೀರಾಜಪೇಟೆ, ಸೆ. ೧೫: ನಾಡಿಗೆ ನಾಡೇ ಇದೀಗ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದೆ. ಕೊಡಗಿನಾದ್ಯಂತ ಸಡಗರದಿಂದ ಗಣೇಶೋತ್ಸವ ಆಚರಿಸಲಾಗಿದೆ. ಆದಿವಂದಿತನ ವಿಗ್ರಹಗಳಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತಿದೆ. ದೇವಸ್ಥಾನ, ಸಮುದಾಯ ಭವನ, ಊರಿನ ಮೈದಾನ, ಸಂಘ ಸಂಸ್ಥೆಗಳಲ್ಲಿ ಗಣೇಶನ ವಿಗ್ರಹಗಳನ್ನಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಗಣೇಶೋತ್ಸವ ಅದ್ದೂರಿಯಾಗಿ ಜರುಗುವ ವೀರಾಜಪೇಟೆಯಲ್ಲಿ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ.

ದೇವಸ್ಥಾನಗಳಲ್ಲಿ ಗಣೇಶ ಚತುರ್ಥಿ

ವೀರಾಜಪೇಟೆಯ ವಿವಿಧ ದೇವಸ್ಥಾನಗಳಲ್ಲಿ, ಬಹುತೇಕ ಕಡೆಗಳಲ್ಲಿ ಉತ್ಸವದ ಮೆರಗು ಕಂಡುಬರುತ್ತಿದೆ. ವೀರಾಜಪೇಟೆಯ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ ಮುಂಜಾನೆಯಿAದಲೇ ಭಕ್ತಸಾಗರ ಕಂಡುಬರುತ್ತಿದೆ, ಅಲ್ಲದೆ ಸಾವಿರಾರು ಭಕ್ತರು ದಿನನಿತ್ಯ ವಿಘ್ನವಿನಾಶಕನಿಗೆ ವಿಶೇಷ ಪೂಜೆ ಸಲ್ಲಿಸುವರು. ಗಣೇಶೋತ್ಸವದ ಹಿನ್ನೆಲೆಯಲ್ಲಿ ಮಹಾಗಣಪತಿ ಕ್ಷೇತ್ರ ವಿವಿಧ ಹೂವುಗಳ ವಿಶೇಷ ಅಲಂಕಾರದಿAದ ಕಂಗೊಳಿಸುತ್ತಿದೆ.

ಜಾತ್ರೆ ವಾತಾವರಣ

ವೀರಾಜಪೇಟೆ ಪಟ್ಟಣ ಮಧುವಣಗಿತ್ತಿಯಂತೆ ಶೃಂಗಾರಗೊAಡಿದ್ದು ನೋಡುಗರನ್ನು ಸೆಳೆಯುತ್ತಿದೆ. ರಾತ್ರಿ ಆಕರ್ಷಕ ವಿದ್ಯುತ್ ಅಲಂಕಾರದಿAದ ಕಂಗೊಳಿಸುತ್ತಿದೆ. ವಿಸರ್ಜನಾ ದಿನದವರೆಗೆ ಜಾತ್ರೆ ವಾತಾವರಣ ನಿರ್ಮಾಣವಾಗಿದೆ.

ವಿವಿಧ ಕಡೆಗಳಲ್ಲಿ ವಿವಿಧ ಸಂಘಟನೆಗಳಿAದ ಗಣಪತಿ ಆರಾಧನೆ ನಡೆಯುತ್ತಿದೆ. ಎಲ್ಲೆಲ್ಲೂ ಹಬ್ಬದ ಅಲಂಕಾರ ಕಂಡುಬರುತ್ತಿದೆ. ಸೆಪ್ಟೆಂಬರ್ ೧೭ರ ತನಕ ವಿವಿಧ ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿ

ನಗರದ ೨೨ ಸ್ಥಳಗಳಲ್ಲಿ ವಿದ್ಯುಕ್ತವಾಗಿ ಚತುರ್ಥಿಯಂದು ವಿಘ್ನವಿನಾಯಕನ ವಿವಿಧ ಭಂಗಿಗಳಲ್ಲಿರುವ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಬಾರಿ ಸೆ.೧೭ ರಂದು ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ಪುನಸ್ಕಾರಗಳಿಂದ ಎಲ್ಲಾ ಸಮಿತಿಗಳ ಉತ್ಸವಮೂರ್ತಿಗಳನ್ನು ಅನಂತಪದ್ಮನಾಭ ವೃತದಂದು ವಿದ್ಯುತ್ ಅಲಂಕೃತ ಪಂಟಪದಲ್ಲಿ ಕುಳ್ಳಿರಿಸಿ ಶೋಭಾಯತ್ರೆಯ ಮೂಲಕ ಮುಖ್ಯಬೀದಿಗಾಗಿ ಸಾಗಿ ತಾ.೧೮ರ ಮುಂಜಾನೆ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.

ವಿಘ್ನ ವಿನಾಶಕನ ಹಬ್ಬವನ್ನು ನಿರ್ವಿಘ್ನವಾಗಿ ನಡೆಸುವ ನಿಟ್ಟಿನಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಪುರಸಭೆ ವತಿಯಿಂದ ಗೌರಿಕೆರೆ ಸಜ್ಜುಗೊಂಡಿದೆ.

ಮುAಜಾಗೃತಾ ಕ್ರಮ

ಈ ಬಾರಿ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಗೌರಿ ಗಣೇಶ ಹಬ್ಬವನ್ನು ಸರ್ವರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಆಚರಿಸುವಂತಾಗಬೇಕು, ನಿಯಮಗಳನ್ನು ಪಾಲಿಸಲೇಬೇಕು. ಈ ನಿಟ್ಟಿನಲ್ಲಿ ಪಟ್ಟಣದ ಗಣೇಶೋತ್ಸವ ಆಚರಣಾ ಸಮಿತಿಯವರು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ಎಲ್ಲಾ ಸಮಿತಿಗಳಿಗೆ ತಿಳಿಸಿದ್ದಾರೆ.

ವಿಸರ್ಜನಾ ಮೆರವಣಿಗೆಯಲ್ಲಿ ನಿಯಮ ಪಾಲಿಸಿ, ತೇರುಗಳ ನಡುವೆ ಅಂತರ ಹೆಚ್ಚಿಸಿ ತೊಂದರೆ ಮಾಡದಂತೆ ಮತ್ತು ತೇರುಗಳ ಮೆರವಣಿಗೆ ವಾಹನ ಸುಸ್ಥಿತಿಯಲ್ಲಿರುವಂತೆ ಜೊತೆಗೆ ಸಮಯ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಸಮಿತಿಗಳು

ಈ ಬಾರಿಯ ಗಣೇಶ ವಿಸರ್ಜನೋತ್ಸವದಲ್ಲಿ, ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಶ್ರೀ ವಿಘ್ನೇಶ್ವರ ಉತ್ಸವ ಸಮಿತಿ ಪುರಸಭೆ, ಶ್ರೀ ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ, ಶ್ರೀ ಗಣಪತಿ ದೇವಾಲಯ ಟ್ರಸ್ಟ್ ಮುಖ್ಯ ರಸ್ತೆ, ಶ್ರೀ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿ ಅಪ್ಪಯ್ಯ ಸ್ವಾಮಿ ರಸ್ತೆ, ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ, ಶ್ರೀ ನೇತಾಜಿ ಉತ್ಸವ ಸಮಿತಿ ನೆಹರು ನಗರ, ಶ್ರೀ ಮಹಾಗಣಪತಿ ಸೇವಾ ಸಂಘ ಗಣಪತಿ ಬೀದಿ ಪಂಜರುಪೇಟೆ, ಶ್ರೀ ಬಸವೇಶ್ವರ ದೇವಸ್ಥಾನ ಜೈನರ ಬೀದಿ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ, ಶ್ರೀ ವಿನಾಯಕ ಯುವ ಭಕ್ತ ಮಂಡಳಿ ಅಂಗಳಾಪರಮೇಶ್ವರಿ ದೇವಾಲಯ, ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ ದಖ್ಖನ್ನಿ ಮೊಹಲ್ಲಾ, ಶ್ರೀ ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ, ಶ್ರೀ ಗಣಪತಿ ಸೇವಾ ಸಮಿತಿ ಗಾಂಧಿನಗರ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ಹರಿಕೇರಿ, ಶ್ರೀ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಬೋಯಿಕೇರಿ, ಶ್ರೀ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಪಂಜರುಪೇಟೆ, ಶ್ರೀ ಜಲದರ್ಶಿನಿ ವಿನಾಯಕ ಸೇವಾ ಸಮಿತಿ ಆಂಜನೇಯ ದೇವಾಲಯ ಚಿಕ್ಕಪೇಟೆ, ಶ್ರೀ ವಿಘ್ನೇಶ್ವರ ಉತ್ಸವ ಸಮಿತಿ ಕೂಕ್ಲೂರು ಗ್ರಾಮ, ಶ್ರಿ ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ ಇವು ಭಾಗವಹಿಸಲಿವೆ.

ಈ ಎಲ್ಲಾ ಮೂರ್ತಿಗಳನ್ನು ಸೆ.೧೮ ರಂದು ಬೆಳಿಗ್ಗಿನ ಜಾವ ಐತಿಹಾಸಿಕ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಇದಕ್ಕಾಗಿ ಪುರಸಭೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ೩೫ನೇ ವರ್ಷದ ಗೌರಿ ಗಣೇಶೋತ್ಸವ ನೆರವೇರಿತು. ತಾ. ೭ ರಂದು ಗಣಪತಿ ಹೋಮದೊಂದಿಗೆ ಆರಂಭವಾಗಿ ಶ್ರೀ ಗೌರಿಗಣೇಶೋತ್ಸವ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು.

ತಾ.೧೫ರಂದು ಸಂಜೆ ಗಣೇಶ ಉತ್ಸವ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದೊAದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಭೂತನಕಾಡು ಹೊಳೆಯಲ್ಲಿ ವಿಸರ್ಜಿಸಲಾಯಿತು.