ಸೋಮವಾರಪೇಟೆ, ಸೆ. ೧೫: ಇದೇ ಪ್ರಥಮ ಬಾರಿಗೆ ಎಂಬAತೆ ಸಾಕಷ್ಟು ಪೊಲೀಸರ ಭದ್ರಕೋಟೆಯ ನಡುವೆ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ಮೂರು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣಪತಿ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನಡೆಯಿತು. ನಾಗಮಂಗಲದ ಘಟನೆಯ ನಂತರ ಪೊಲೀಸ್ ಇಲಾಖೆ ತೀವ್ರ ಎಚ್ಚರಿಕೆ ವಹಿಸಿರುವಂತೆ ಕಂಡುಬAತು.

ಪಟ್ಟಣದ ಸಾರ್ವಜನಿಕ ಶ್ರೀ ಗೌರಿ ಗಣಪತಿ ಉತ್ಸವ ಸಮಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗಳು, ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಹಾಗೂ ಮಹದೇಶ್ವರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕೊಂಡೊಯ್ದು ಆನೆಕೆರೆಯಲ್ಲಿ ವಿಸರ್ಜಿಸಲಾಗಿಯಿತು.

ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು, ಹೋಮಗಳು ನಡೆದವು. ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಸಂಜೆ ವಾದ್ಯಗೋಷ್ಠಿ, ಅಬ್ಬರದ ಧ್ವನಿವರ್ಧಕ, ಬ್ಯಾಂಡ್‌ಸೆಟ್, ವಿದ್ಯುತ್ ದೀಪಾಲಂಕೃತ ಮಂಟಪಗಳಲ್ಲಿ ಉತ್ಸವ ಮೂರ್ತಿಗಳನ್ನು ಅದ್ದೂರಿ ಮೆರವಣಿಗೆ ನಡೆಸಲಾಯಿತು. ನಂತರ ಆನೆಕೆರೆಯಲ್ಲಿ ಶಾಸ್ತೊçÃಕ್ತವಾಗಿ ವಿಸರ್ಜಿಸಲಾಯಿತು.

ಬಾರ್‌ಗಳು ಬಂದ್: ಇದೇ ಪ್ರಥಮ ಎಂಬAತೆ ಮುಂಜಾಗ್ರತಾ ಕ್ರಮವಾಗಿ ಉತ್ಸವ ಮೂರ್ತಿಗಳ ವಿಸರ್ಜನಾ ದಿನದಂದು ಬೆಳಿಗ್ಗಿನಿಂದಲೇ ಪಟ್ಟಣದ ಬಾರ್‌ಗಳನ್ನು ಬಂದ್ ಮಾಡಲಾಗಿತ್ತು. ಅಂತೆಯೇ ಅಬ್ಬೂರುಕಟ್ಟೆಯಲ್ಲಿರುವ ಮದ್ಯದಂಗಡಿಯನ್ನೂ ಮುಚ್ಚಿಸಲಾಗಿತ್ತು. ಸಾಧಾರಣವಾಗಿ ಪಟ್ಟಣದ ಬಾರ್‌ಗಳನ್ನು ಸಂಜೆ ವೇಳೆ ಬಂದ್ ಮಾಡುತ್ತಿದ್ದರೆ, ಅಬ್ಬೂರುಕಟ್ಟೆಯ ಬಾರ್‌ಗೆ ಯಾವುದೇ ಅಡೆತಡೆ ಇರುತ್ತಿರಲಿಲ್ಲ.

ಎಲ್ಲೆಲ್ಲೂ ಪೊಲೀಸರು: ಗಣಪತಿ ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭ ಈ ಹಿಂದಿನ ವರ್ಷಗಳಲ್ಲಿ ಪಟ್ಟಣದಲ್ಲಿ ಯಾವುದೇ ಕೋಮು ಸೂಕ್ಷö್ಮ ಅಹಿತಕರ ಘಟನೆಗಳು ನಡೆದಿಲ್ಲವಾದರೂ, ನಾಗಮಂಗಲ ಘಟನೆಯ ಹಿನ್ನೆಲೆ ಈ ಬಾರಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಉತ್ಸವ ಮೂರ್ತಿಗಳು ತೆರಳುವ ರಸ್ತೆಯ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು, ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿತ್ತು. ಮಸೀದಿಗಳ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಂಡುಬAದರು. ವಾಹನಗಳ ಸಂಚಾರಕ್ಕೂ ಯಾವುದೇ ಅಡಚಣೆಯಾಗದಂತೆ ಪೊಲೀಸರು ಕ್ರಮವಹಿಸಿದ್ದರು.

ಡಿವೈಎಸ್‌ಪಿ ಗಂಗಾಧರಪ್ಪ ಅವರು ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದರು. ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಾದೇವ ಅವರ ನೇತೃತ್ವದಲ್ಲಿ, ಈರ್ವರು ಪೊಲೀಸ್ ಇನ್ಸ್ಪೆಕ್ಟರ್, ನಾಲ್ವರು ಪೊಲೀಸ್ ಠಾಣಾಧಿಕಾರಿಗಳು, ಎಎಸ್‌ಐ, ಪೊಲೀಸ್ ಠಾಣಾ ಸಿಬ್ಬಂದಿಗಳು, ಕೆಎಸ್‌ಆರ್‌ಪಿ, ಡಿಎಆರ್, ಹೋಂ ಗಾರ್ಡ್ಗಳ ಸಹಿತ ೧೦೦ಕ್ಕೂ ಅಧಿಕ ಮಂದಿ ಸಿಬ್ಬಂದಿಗಳು ಬಂದೋಬಸ್ತ್ನಲ್ಲಿದ್ದರು. ಸೋಮವಾರಪೇಟೆ ಪೊಲೀಸ್ ಠಾಣೆಯೊಂದಿಗೆ ಶನಿವಾರಸಂತೆ, ಸುಂಟಿಕೊಪ್ಪ, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಸಿಬ್ಬಂದಿಗಳು ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.