ಗೋಣಿಕೊಪ್ಪಲು, ಸೆ. ೧೫: ಅಸ್ಸಾಂ ಮೂಲದ ಮೂವರು ಕಾರ್ಮಿಕರು ಗೋಮಾಂಸ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ ಘಟನೆ ಗೋಣಿಕೊಪ್ಪ ಸಮೀಪದ ಅತ್ತೂರು ಬಳಿ ನಡೆದಿದೆ.

ಅಸ್ಸಾಂ ಮೂಲದ ಕಾರ್ಮಿಕರಾದ ರಹೀಂ ಅಲಿ, ಸೋಹಿದುಲ್ಲಾ ಹಾಗೂ ಮುನ್ನಾಸ್ ಎಂಬವರನ್ನು ಮಾಲು ಸಹಿತ ಬಂಧಿಸಿ ಸ್ವಯಂ ಪ್ರೇರಿತ ಪ್ರಕರಣ (ಸುಮೋಟೊ) ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗೋಣಿಕೊಪ್ಪ ಸಂತೆ ದಿನವಾದ ಭಾನುವಾರದಂದು ಅಕ್ರಮ ಗೋಮಾಂಸವನ್ನು ತಂದು ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

(ಮೊದಲ ಪುಟದಿಂದ)ಆರೋಪಿಗಳು ೨೨ ಕೆ.ಜಿ. ಗೋಮಾಂಸವನ್ನು ಮಾರಾಟ ಮಾಡುವ ಸಲುವಾಗಿ ಅತ್ತೂರು ಬಳಿಯ ರಸ್ತೆಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಗೋಣಿಕೊಪ್ಪ ಪೊಲೀಸ್ ಗಸ್ತು ಪಡೆ ವಿಚಾರಣೆ ಮಾಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ನಂತರ ಆರೋಪಿಗಳನ್ನು ಬಂಧಿಸಿ ಗೋಣಿಕೊಪ್ಪ ಠಾಣೆಗೆ ಕರೆತರಲಾಯಿತು.

ಸುದ್ದಿ ತಿಳಿದ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷÀ ಪಂದ್ಯAಡ ಹರೀಶ್ ಮುಂದಾಳತ್ವದಲ್ಲಿ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗೋಣಿಕೊಪ್ಪ ಪೊಲೀಸ್ ಠಾಣೆ ಎದುರು ಜಮಾಯಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ನಿರಂತರ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಸಂತೆ ಮಾರುಕಟ್ಟೆಯಲ್ಲಿ ಗೋಮಾಂಸ ಮಾರಾಟ ಮಾಡುವ ಹಂತಕ್ಕೂ ಬಂದು ತಲುಪಿದ್ದಾರೆ ಇದು ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಅಸ್ಸಾಂ ಕಾರ್ಮಿಕರ ಬಗ್ಗೆ ತೋಟ ಮಾಲೀಕರು ಅಗತ್ಯ ದಾಖಲೆ ಪಡೆದು ಪೊಲೀಸರಿಗೆ ನೀಡಬೇಕಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಕಾರ್ಮಿಕರ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ದಾಖಲೆ ಇಲ್ಲದ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ತೋಟ ಕೆಲಸಕ್ಕೆ ನೇಮಕ ಮಾಡಿಕೊಳ್ಳದಂತೆ ಆಗ್ರಹಿಸಿದರು. ಠಾಣೆಯ ಮುಂದೆ ಪ್ರಮುಖರಾದ ಅಮೃತ್ ರಾಜ್, ಸುಳ್ಳಿಮಾಡ ಸಂಪತ್, ಅಲ್ಲುಮಾಡ ಶರತ್, ವಿವೇಕ್ ರಾಯ್ಕರ್, ಮಂಜು, ದೀಪಕ್, ಕೆ.ವಿ. ಅನಿಲ್ ಸೇರಿದಂತೆ ಅನೇಕರು ಜಮಾಯಿಸಿದ್ದರು. - ಹೆಚ್.ಕೆ.ಜಗದೀಶ್