ಮಡಿಕೇರಿ, ಸೆ. ೧೩: ಪೋಷಣ್ ಮಾಸಾಚರಣೆ ಅಂಗವಾಗಿ ಹದಿ ಹರೆಯದ ಹೆಣ್ಣು ಮಕ್ಕಳು, ಅಂಗನ ವಾಡಿ ಫಲಾನುಭವಿಗಳಿಗೆ ಆರೋಗ್ಯ ತಪಾಸಣೆ, ರಕ್ತ ಹೀನತೆ ಪರೀಕ್ಷೆ ನಡೆಸಲಾಯಿತು.

ಮೂರ್ನಾಡು ಅಂಗನವಾಡಿ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಗಾಂಧಿನಗರ, ಶಾಸ್ತಿçನಗರ, ಬಾಡಗ ೧, ಬಾಡಗ ೨, ಕೋಡಂಬೂರು, ಕಾಂತೂರು, ಕಿಗ್ಗಾಲು, ಐಕೊಳ ೧, ಐಕೊಳ ೨, ಐಕೊಳ ೩ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳು ಭಾಗವಹಿಸಿದ್ದರು. ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯ ಕುಮಾರ್ ಹಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆ ಹೇಮಲತಾ, ಆರೋಗ್ಯ ಇಲಾಖೆಯ ಕಾಂಚನ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಹಾಜರಿದ್ದರು.