*ಗೋಣಿಕೊಪ್ಪ, ಸೆ. ೧೩: ಯಂತ್ರದ ಮೂಲಕ ಭತ್ತ ನಾಟಿ ಪ್ರಾತ್ಯಕ್ಷಿತೆ ತರಬೇತಿ ಕಾರ್ಯಕ್ರಮ ವನ್ನು ವೀರಾಜಪೇಟೆ ತಾಲೂಕು ಮೂರ್ನಾಡು ವಲಯದ, ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನಿಂದ ಹಮ್ಮಿಕೊಳ್ಳಲಾಯಿತು.

ಬೋಪಣ್ಣ ಅವರ ಗದ್ದೆಯಲ್ಲಿ ಪ್ರಾತ್ಯಕ್ಷಿತೆ ಕಾರ್ಯಾಗಾರ ನಡೆಯಿತು. ನಾಟಿ ಬ್ಯಾಂಕ್ ಮೇಲ್ವಿಚಾರಕ ಹರೀಶ್ ಈ ಸಂದರ್ಭ ಮಾತನಾಡಿ, ಪ್ರಸ್ತುತ ವರ್ಷ ವೀರಾಜಪೇಟೆ ತಾಲೂಕಿನ ರೈತರಿಗೆ ಉಪಯೋಗವಾಗುವ ದೃಷ್ಟಿಯಲ್ಲಿ ಅಮ್ಮತ್ತಿಯಲ್ಲಿ ನಾಟಿ ಯಂತ್ರ ಬ್ಯಾಂಕ್ ತೆರೆದಿದ್ದು, ನಾಟಿ ಯಂತ್ರ ಬ್ಯಾಂಕಿನಲ್ಲಿ ಇರುವ ನಾಟಿ ಯಂತ್ರಗಳ ಮೂಲಕ ೮೦೦ ಎಕರೆಯಲ್ಲಿ ಯಂತ್ರಶ್ರೀ ಅನುಷ್ಠಾನ ಮಾಡಲಾಗಿದೆ.

ಭತ್ತದ ಕೇಂದ್ರೀಕೃತ ನರ್ಸರಿ ಮಾಡುವ ವಿಧಾನ, ಭತ್ತದ ತಳಿಗಳು, ಮಣ್ಣಿನ ಸಂಗ್ರಹ ಟ್ರೇಗಳ ಬಳಕೆ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಮೂರ್ನಾಡು ವಲಯದ ಮೇಲ್ವಿಚಾರಕ ಪ್ರತಾಪ್, ವ್ಯವಸ್ಥಾಪಕ ಯಶವಂತ್, ಕೃಷಿ ಮೇಲ್ವಿಚಾರಕ ವಸಂತ್, ಒಕ್ಕೂಟದ ಕಾರ್ಯದರ್ಶಿ ಲಕ್ಷಿö್ಮÃ, ಸೇವಾ ಪ್ರತಿನಿಧಿ ದಿವ್ಯ, ಊರಿನ ಪ್ರಮುಖರಾದ ಶೀಲಾ, ಗಣಪತಿ, ಸಂಘದ ಸದಸ್ಯರು ಇದ್ದರು.