ಮಡಿಕೇರಿ, ಸೆ. ೧೩: ಚೆನ್ನೆöÊಯಲ್ಲಿ ಜರುಗುತ್ತಿರುವ ನಾಲ್ಕನೇಯ ಆವೃತ್ತಿಯ ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಕ್ರೀಡಾಪುಟಗಳಾದ ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಹಾಗೂ ತೇಲಪಂಡ ಬೋಪಣ್ಣ ಇವರಿಬ್ಬರೂ ಪದಕದ ಸಾಧನೆ ತೋರಿದ್ದಾರೆ.

೧೦೦ ಮೀಟರ್ ಹರ್ಡಲ್ಸ್ನಲ್ಲಿ ಉನ್ನತಿ ಅಯ್ಯಪ್ಪ ೧೩.೯೩ ಸೆಕೆಂಡ್ಸ್ನಲ್ಲಿ ಗುರಿ ತಲುಪಿ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ೮೦೦ ಮೀಟರ್ ಓಟದಲ್ಲಿ ತೇಲಪಂಡ ಬೋಪಣ್ಣ ಕೂಡ ಕಂಚಿನ ಪದಕದ ಸಾಧನೆ ಮಾಡಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಉನ್ನತಿ ಮೂಲತಃ ಮಡಿಕೇರಿಯವರಾದ ರಾಷ್ಟಿçÃಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ದಂಪತಿಯ ಪುತ್ರಿ ಹಾಗೂ ಬೋಪಣ್ಣ ಹಾಲುಗುಂದದವರಾದ ಡಾ. ತೇಲಪಂಡ ಕಾಳಪ್ಪ ಹಾಗೂ ರಚನಾ ದಂಪತಿಯ ಪುತ್ರ.