ವೀರಾಜಪೇಟೆ, ಸೆ. ೧೨: ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿರುವ ಸಂತ ಫಾತಿಮಾ ದೇವಾಲಯದಲ್ಲಿ ಮಾತೆ ಮೇರಿಯವರ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಪೂಜೆಯ ಬಳಿಕ ಗ್ರಾಮದ ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಶಿಕ್ಷಕರಾದ ಟ್ರಸಿಲ್ಲ ಡಿಸೋಜಾ, ವಿಕ್ಕಿ ಡಿಮೆಲ್ಲೋ ಮತ್ತು ಲಿಲ್ಲಿ ಡಿಸೋಜಾ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದೇವಾಲಯದ ಗುರುಗಳಾದ ವಿಲ್ಫೆçಡ್ ಹಾಗೂ ಫಾ. ಮಾನುವೆಲ್ ಡಿಸೋಜಾ ಸನ್ಮಾನಿತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.