ವೀರಾಜಪೇಟೆ, ಸೆ. ೧೨: ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ ವೀರಾಜಪೇಟೆ ಇವರ ವತಿಯಿಂದ ಗೌರಿಗಣೇಶ ಉತ್ಸವದ ಅಂಗವಾಗಿ ತಾ. ೧೭ ರಂದು ಗೌರಿಗಣೇಶ ವಿಸರ್ಜನಾ ದಿನದಂದು ಕಾರು ನಿಲ್ದಾಣದ ಸಭಾಂಗಣದಲ್ಲಿ ರಾತ್ರಿ ಸಂಗೀತ ರಸಸಂಜೆ ಹಾಗೂ ಸ್ಥಳೀಯ ಪ್ರತಿಭೆಗಳ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್ ಶಿವು ತಿಳಿಸಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸಂಘ ಪ್ರಾರಂಭಗೊAಡು ೩ ವರ್ಷಗಳು ಕಳೆದಿವೆ. ಸಂಘದಲ್ಲಿ ೩೫೦ಕ್ಕೂ ಅಧಿಕ ಸದಸ್ಯರಿದ್ದಾರೆ. ಸಂಘದ ವತಿಯಿಂದ ಮೀನುಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ವೆಚ್ಚದ ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗಿದೆ.

ಪಾಲಂಗಾಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳು ಸೇರಿದಂತೆ ಪಟ್ಟಣದ ಸುತ್ತಮುತ್ತ ಇರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ, ಸ್ವೆಟರ್ ವಿತರಣೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಸಂಘ ನಡೆಸಿಕೊಂಡು ಬಂದಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಬಿ.ಕೆ. ಜೀವನ್ ಮಾತನಾಡಿ, ಗೌರಿಗಣೇಶ ಹಬ್ಬದ ಪ್ರಯುಕ್ತ ಅಂದು ಸಂಜೆ ೪ ಗಂಟೆಗೆ ಸ್ಥಳೀಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಭೆಗಳು ೧೬ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಆಸಕ್ತರು ೭೦೨೨೩೯೮೨೯೫/ ೯೯೦೧೯೬೯೮೫೯ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಬಹುದು. ೮ ಗಂಟೆಗೆ ನಡೆಯುವ ರಸಸಂಜೆ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ತೋರೆರ ಪ್ರಭು ಕುಟ್ಟಪ್ಪ, ಹಾರ್ಮೋನಿಯಂ ವಾದಕ ಶಶಿಕುಮಾರ್, ದೈವನರ್ತಕ ಬೀಕಚಂಡ ಪುಟ್ಟ ಅವರುಗಳನ್ನು ಸನ್ಮಾನಿಲಾಗುವುದು ಎಂದು ಹೇಳಿದರು.

ಸಂಘದ ಗೌರವ ಅಧ್ಯಕ್ಷ ತೋರೆರ ಕುಟ್ಟಪ್ಪ ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಳೇಟಿರ ಚುಕ್ಕು ದೇವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಮೇಶ್ವರ್, ಕಾವೇರಿ ಲಘು ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಹೇಮಂತ್, ಕಾಫಿ ಬೆಳೆಗಾರರು ಹಾಗು ದಾನಿಗಳಾದ ಕೊಪ್ಪಡ ಪಟ್ಟು ಪಳಂಗಪ್ಪ, ಸಂಘದ ಗೌರವ ಅಧ್ಯಕ್ಷ ತೋರೆರ ಕುಟ್ಟಪ್ಪ, ಗೌರವ ಸಲಹೆಗಾರ ಪ್ರವೀಣ್ ಶೇಟ್ ಉಪಸ್ಥಿತರಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಖಜಾಂಚಿ ಅರ್ಜುನ್ ತಿಮ್ಮಯ್ಯ, ಸಹಕಾರ್ಯದರ್ಶಿ ಜೇಕೋಬ್ ನರೋನಾ, ಗೌರವ ಸಲಹೆಗಾರ ಪ್ರವೀಣ್ ಶೇಟ್, ನಿರ್ದೇಶಕರಾದ ಟÊಗರ್ ಕಿರಣ್, ದಿನೇಶ್ ಉಪಸ್ಥಿತರಿದ್ದರು.