ಸುಂಟಿಕೊಪ್ಪ,ಸೆ.೧೨: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮ ಮಂದಿರದಲ್ಲಿ ನಡೆಯುತ್ತಿರುವ ೬೦ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಆದಿ ಚುಂಚನಗಿರಿ ಮಠದ ಸಂಗೀತ ಶಿಕ್ಷಕ ರವಿ ಭೂತನಕಾಡು ಅವರಿಂದ ಗೀತಗಾಯನ ನಡೆಯಿತು. ದಾಸರ ಗೀತೆಗಳು, ಭಕ್ತಿಗೀತೆಗಳು, ಜಾನಪದ ಗೀತೆಗಳು, ಭಾವಗೀತೆಗಳ ಮೂಲಕ ರವಿ ಭೂತನಕಾಡು ರಂಜಿಸಿದರು. ಇದರೊಂದಿಗೆ ಧನಂಜಯ ಅಗೋಳಿಕಜೆ ಅವರಿಂದ ರಾಷ್ಟçದ ವಿಚಾರ ಮಂಥನ ನಡೆಯಿತು.