ಗೋಣಿಕೊಪ್ಪಲು, ಸೆ.೧೨ : ತಿತಿಮತಿ ಅರಣ್ಯ ವಲಯದ ಗ್ರಾಮಗಳಾದ ತಿತಿಮತಿ, ಮಾಯಮುಡಿ, ಧನುಗಾಲ, ನೊಕ್ಯ ಸೇರಿದಂತೆ ಇನ್ನಿತರ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಹತೋಟಿಗೆ ತರುವ ಕಾರ್ಯ ಅಧಿಕಾರಿಗಳು ತಕ್ಷಣದಿಂದಲೇ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿ ವಿರಾಜಪೇಟೆ ಡಿಎಫ್‌ಒ ಜಗನ್ನಾಥ್ ಅವರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಮಾಯಮುಡಿಯ ರೈತ ಸಣ್ಣುವಂಡ ರಮೇಶ್ ಮುಂದಾಳತ್ವದಲ್ಲಿ ತಿತಿಮತಿ ಅರಣ್ಯ ವಲಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬೆಳೆಗಾರರು ಹಾಗೂ ರೈತರು ಕೆಲ ದಿನಗಳಿಂದ ಕಾಡಾನೆಯ ಉಪಟಳದಿಂದಾಗಿ ರೈತರ ತೋಟದಲ್ಲಿರುವ ಕಾಫಿ ಗಿಡಗಳು ಸೇರಿದಂತೆ ಇನ್ನಿತರ ಗಿಡಗಳು ಹಾಳಾಗುತ್ತಿವೆ. ಕಾಫಿ, ಅಡಿಕೆ, ತೆಂಗು, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳು ರೈತರಿಗೆ ಲಭಿಸುತ್ತಿಲ್ಲ. ಇವುಗಳ ಮೇಲೆ ಕಾಡಾನೆಗಳು ದಾಳಿ ನಡೆಸುವುದರಿಂದ ನಷ್ಟ ಸಂಭವಿಸುತ್ತಿದೆ. ಫಸಲು ಇಲ್ಲದೆ ರೈತರು ಬವಣೆಪಡುವಂತಾಗಿದೆ.

ಕಾಡಾನೆಗಳ ಓಡಾಟದಿಂದ ನಾಗರಿಕರು ನಡೆದಾಡಲು ಸಾಧ್ಯವಾಗುತ್ತಿಲ್ಲ. ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಮಾನವನ ಮೇಲೆ ಕಾಡಾನೆಗಳು ದಾಳಿ ನಡೆಸುತ್ತಿವೆ. ಕಾಡಾನೆಗಳು ಎಲ್ಲಿ ವಾಸಿಸುತ್ತಿವೆ ಎಂಬುದು ಜನರ ಅರಿವಿಗೆ ಬರುತ್ತಿಲ್ಲ. ಜನರು ಓಡಾಡುವ ಪ್ರದೇಶಗಳಲ್ಲಿಯೇ ಆನೇಕ ಅವಘಡಗಳು ಸಂಭವಿಸಿವೆ ಎಂದು ಆರೋಪಿಸಿದರು.

ಅರಣ್ಯ ಇಲಾಖೆ ವನ್ಯಜೀವಿ, ಆನೆಗಳನ್ನು ಹತೋಟಿಗೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಯಾವುದೇ ರೀತಿಯ ತಂತ್ರಜ್ಞಾನವನ್ನು ಬಳಸಲು ಮುಂದೆ ಬರುತ್ತಿಲ್ಲ. ಕೇವಲ ಅನಾಹುತಗಳು ನಡೆದಾಗ ಪರಿಹಾರ ರೂಪದಲ್ಲಿ ನೀಡುವ ಹಣದಿಂದ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾ ಗುವುದಿಲ್ಲ. ಕಾಡಾನೆಗಳನ್ನು ಹತೋಟಿಗೆ ತರಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ರೈತರ ಹಾಗೂ ಬೆಳೆಗಾರರ ಸಮಸ್ಯೆಯನ್ನು ಆಲಿಸಿದ ವಿರಾಜಪೇಟೆ ಡಿಎಫ್‌ಒ ಜಗನ್ನಾಥ್ ಮಾತನಾಡಿ ಮಳೆ ಕಡಿಮೆಯಾಗುತ್ತಿದ್ದಂತೆ ಈಗಾಗಲೇ ನಿರ್ಮಾಣಗೊಂಡಿರುವ ಕಂದಕಗಳನ್ನು ದುರಸ್ತಿ ಮಾಡ ಲಾಗುವುದು. ಕಾಡಾನೆಗಳು ಬರುತ್ತಿರುವ ಮಾರ್ಗದಲ್ಲಿ ಸೋಲಾರ್ ಫೆನ್ಸ್ಗಳನ್ನು ಅಳವಡಿಸಲಾಗುವುದು. ಜನನಿಬಿಡ ಪ್ರದೇಶದಲ್ಲಿ

(ಮೊದಲ ಪುಟದಿಂದ) ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು. ಕಾಡಾನೆಗಳು ಬರುವ ಸ್ಥಳದಲ್ಲಿ ವಾಚ್ ಟವರ್ ನಿರ್ಮಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಇದು ತಾತ್ಕಾಲಿಕ ಕಾರ್ಯಕ್ರಮವಾಗಿ ಆದಷ್ಟು ಬೇಗನೇ ಕ್ರಮಕ್ಕೆ ಮುಂದಾಗುತ್ತೇವೆ. ಈಗಾಗಲೇ ರೈತರಿಗೆ, ಬೆಳೆಗಾರರಿಗೆ ಕಾಡಾನೆಗಳಿಂದ ನಷ್ಟಗೊಂಡ ಬೆಳೆಗಳಿಗೆ ಪರಿಹಾರವನ್ನು ಶೀಘ್ರವಾಗಿ ನೀಡುವ ಕೆಲಸ ಮಾಡುತ್ತೇವೆ. ಇಲಾಖೆಯೊಂದಿಗೆ ರೈತರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಪ್ರಾರಂಭವಾಗಲಿದೆ ಎಂದರು.

ತಿತಿಮತಿ ನೋಕ್ಯ ಗ್ರಾಮದ ಕಾಫಿ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ, ಶೆರಿ ಸುಬ್ಬಯ್ಯ, ಎಸ್.ಎಂ.ಸುರೇಶ್ ಸೇರಿದಂತೆ ಇನ್ನಿತರ ಬೆಳೆಗಾರರು ಪ್ರತಿನಿತ್ಯ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿದರು. (ಮೊದಲ ಪುಟದಿಂದ) ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು. ಕಾಡಾನೆಗಳು ಬರುವ ಸ್ಥಳದಲ್ಲಿ ವಾಚ್ ಟವರ್ ನಿರ್ಮಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಇದು ತಾತ್ಕಾಲಿಕ ಕಾರ್ಯಕ್ರಮವಾಗಿ ಆದಷ್ಟು ಬೇಗನೇ ಕ್ರಮಕ್ಕೆ ಮುಂದಾಗುತ್ತೇವೆ. ಈಗಾಗಲೇ ರೈತರಿಗೆ, ಬೆಳೆಗಾರರಿಗೆ ಕಾಡಾನೆಗಳಿಂದ ನಷ್ಟಗೊಂಡ ಬೆಳೆಗಳಿಗೆ ಪರಿಹಾರವನ್ನು ಶೀಘ್ರವಾಗಿ ನೀಡುವ ಕೆಲಸ ಮಾಡುತ್ತೇವೆ. ಇಲಾಖೆಯೊಂದಿಗೆ ರೈತರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಪ್ರಾರಂಭವಾಗಲಿದೆ ಎಂದರು.

ತಿತಿಮತಿ ನೋಕ್ಯ ಗ್ರಾಮದ ಕಾಫಿ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ, ಶೆರಿ ಸುಬ್ಬಯ್ಯ, ಎಸ್.ಎಂ.ಸುರೇಶ್ ಸೇರಿದಂತೆ ಇನ್ನಿತರ ಬೆಳೆಗಾರರು ಪ್ರತಿನಿತ್ಯ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿದರು.