ನಾಪೋಕ್ಲು, ಸೆ. ೧೨: ಇಲ್ಲಿನ ವಿಚಾರ ಸಂಕಿರಣವನ್ನು ದೇವಧನ್ ಫೌಂಡೇಶನ್ ಮೈಸೂರು ವತಿಯಿಂದ ಇತ್ತೀಚೆಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ದೇವಧನ್ ಫೌಂಡೇಶನ್ನ ಬಲ್ಲಚಂಡ ಧನ್ಯ ಪೊನ್ನಮ್ಮ, ಕೋಟೆರ ದೇವಯ್ಯ ಹಾಗೂ ತಂಡದಿAದ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಖಿನ್ನತೆ ಹಾಗೂ ಆಕ್ರಮಣಕಾರಿ ವರ್ತನೆಯ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಬಾರದು. ಉತ್ತಮ ಗುಣ ನಡತೆಗಳನ್ನು ರೂಪಿಸಿಕೊಳ್ಳಬೇಕು. ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಈಗಿನಿಂದಲೇ ಯೋಜನೆ ಹಾಕಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮವನ್ನು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಸಂಘ ಆಯೋಜಿಸಿತ್ತು. ಈ ಸಂದರ್ಭ ಸಂಘದ ಸಂಚಾಲಕಿ ಶೋಭ ಕೆ.ಎಸ್., ಸ್ಮಿತಾ, ಸಂಘದ ಸದಸ್ಯರು ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.