ಕರಿಕೆ, ಸೆ. ೧೨: ಭಾಗಮಂಡಲ ಹೋಬಳಿ ಕರಿಕೆ ಗ್ರಾಮದ ಕೊಚ್ಚಿ ಕಾಲೋನಿಯ ವಿಶೇಷಚೇತನ ನಾರಿಯಂಬಾಡಿ ಅವರು ಅನಾರೋಗ್ಯದಿಂದ ಬಳಲುತಿದ್ದು, ವಯಸ್ಕ ತಾಯಿಕೂಡ ಇದ್ದು ಅಶಕ್ತರಾಗಿದ್ದಾರೆ.
ಜೀವನಕ್ಕೆ ಬದಲಿ ವ್ಯವಸ್ಥೆ ಇಲ್ಲದಿರುವ ಬಗ್ಗೆ ತಹಶೀಲ್ದಾರರಿಗೆ ಮಾಹಿತಿ ನೀಡಿದ ಪರಿಣಾಮ ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಭೇಟಿ ನೀಡಿ ಆಹಾರ ಕಿಟ್, ಕಂಬಳಿ ಬೆಡ್ಶೀಟ್ ಹಾಗೂ ಇತರೆ ಅವಶ್ಯಕ ಸಾಮಗ್ರಿ ವಸ್ತುಗಳನ್ನು ತಾಲೂಕು ಆಡಳಿತ ವತಿಯಿಂದ ವಿತರಿಸಿದರು. ಈ ಸಂದರ್ಭ ಕಂದಾಯ ಪರಿವೀಕ್ಷಕ ಶಿವಕುಮಾರ್, ಗ್ರಾಮಾಡಳಿತ ಅಧಿಕಾರಿಗಳಾದ ಜಟ್ಟೆಯಪ್ಪ ಹಾಗೂ ಅನೂಪ್ ಹಾಜರಿದ್ದರು.