ತನಿಖಾ ವರದಿ -ಚಂದ್ರಮೋಹನ್
ಕುಶಾಲನಗರ, ಸೆ. ೧೨: ಕೆಲವು ಖಾಸಗಿ ವ್ಯಕ್ತಿಗಳು ರಿಯಲ್ ಎಸ್ಟೇಟ್ ದಂಧೆ ಜೊತೆ ಶಾಮೀಲಾಗಿ ಅರಣ್ಯ ಇಲಾಖೆಗೆ ಸೇರಿದ ಊರುಡುವೆ ಪೈಸಾರಿ ಜಾಗದಲ್ಲಿನ ಕೆರೆಯಲ್ಲಿನ ನೂರಾರು ಲೋಡುಗಳ ಮಣ್ಣನ್ನು ತೆಗೆದು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಿದ ಪ್ರಕರಣ ಒಂದು ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಇದುವರೆಗೆ ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ ನಾಮಕಾವಸ್ಥೆಗೆ ಮೂರು ಮಂದಿ ಮೇಲೆ ಮೊಕದಮ್ಮೆ ಹೂಡಿರುವ ಬಗ್ಗೆ ಅಧಿಕಾರಿಗಳ ಕ್ರಮದ ಮೇಲೆ ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಖೂರು ಗ್ರಾಮದ ಸರ್ವೆ ನಂಬರ್ ೧/೧ ರಲ್ಲಿನ ಸುಣ್ಣದ ಕೆರೆ ಎಂಬ ಜಾಗದಲ್ಲಿ ಸುಮಾರು ಹತ್ತರಿಂದ ಹದಿನೈದು ಅಡಿಗಳ ಆಳಕ್ಕೆ ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರು ಸಂಬAಧಿಸಿದ್ದ ಇಲಾಖೆಗಳಿಗೆ ದೂರು ನೀಡಿದ್ದರು.
ವಾಸ್ತವವಾಗಿ ಅರಣ್ಯ ಇಲಾಖೆಯ ಸುಪರ್ದಿಗೆ ಸೇರಿರುವ ಮೀಸಲು ಅರಣ್ಯ ವ್ಯಾಪ್ತಿಯ ಸುಣ್ಣದ ಕೆರೆ ಸುಮಾರು ಅರ್ಧ ಎಕರೆ ವಿಸ್ತೀರ್ಣ ಉಳ್ಳ ಕೆರೆಯಾಗಿದ್ದು ಈ ಕೆರೆಯಿಂದ ಬೃಹತ್ ಹಿಟಾಚಿ ಯಂತ್ರಗಳ ಬಳಕೆ ಮೂಲಕ ನೂರಾರು ಲೋಡುಗಳಷ್ಟು ಮಣ್ಣನ್ನು ಮಾರಾಟ ಮಾಡಿರುವ ಮಾಹಿತಿ ಶಕ್ತಿಯ ತನಿಖೆಯ ಮೂಲಕ ಬೆಳಕಿಗೆ ಬಂದಿದೆ.
ಹಲವು ದಿನಗಳ ಕಾಲ ಅಕ್ರಮ ಮಣ್ಣು ಸಾಗಾಟ ವಿಷಯ ತಿಳಿದಿದ್ದರೂ, ಸಂಬAಧಿಸಿದ ಇಲಾಖೆ ಅಧಿಕಾರಿಗಳು ಸಂಪೂರ್ಣ ಮೌನ ವಹಿಸಿರುವುದು ಇದೀಗ ಸಂಶಯಕ್ಕೆ ಎಡೆಮಾಡಿದೆ.
ಕುಶಾಲನಗರ ವ್ಯಾಪ್ತಿಯಲ್ಲಿ ಬೆಟ್ಟವನ್ನು ಆಗಿಯುವ ಮೂಲಕ ಗುಂಡಿಯನ್ನು ಮುಚ್ಚುವ ರಿಯಲ್ ಎಸ್ಟೇಟ್ ದಂಧೆ ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಿದ್ದು ಇದರಿಂದ ಮಳೆಗಾಲದಲ್ಲಿ ವ್ಯತಿರಿಕ್ತ ಪರಿಣಾಮವಾಗುತ್ತಿರುವುದು ಕಳೆದ ಕೆಲವು ವರ್ಷಗಳಿಂದ ಕುಶಾಲನಗರ ಸುತ್ತಮುತ್ತ ನಡೆಯುತ್ತಿದೆ. ಇದರಿಂದ ಈ ಭಾಗದ ನಾಗರಿಕರು ಮಳೆಗಾಲದಲ್ಲಿ ಆತಂಕದ ಪರಿಸ್ಥಿತಿ ಎದುರಿಸಬೇಕಾಗಿರುವುದು ಬಗೆಹರಿಯದ ಸಮಸ್ಯೆಯಾಗಿದೆ.
ಈ ವಿಷಯಗಳು ಹಾಡು ಹಗಲೇ ನಡೆಯುತ್ತಿದ್ದರೂ ಸಂಬAಧಿಸಿದ ಇಲಾಖೆ ಅಧಿಕಾರಿಗಳು, ಸ್ಥಳೀಯ ಆಡಳಿತದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ದಿವ್ಯ ಮೌನಕ್ಕೆ ಶರಣಾಗುತ್ತಿರುವ ವಿಷಯ ನಾಗರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಕ್ರಮ ಮಣ್ಣು ಸಾಗಾಟದ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗುತ್ತಿದೆ. ಜೊತೆಗೆ ಸ್ಥಳೀಯ ನಿವಾಸಿಗಳಿಗೆ ವ್ಯಾಪಕವಾದ ಧೂಳು ರಾಚುವ ಜೊತೆಗೆ ಶಬ್ಧ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರು ದೂರಿದರೂ ಯಾವುದೇ ಪ್ರಯೋಜನ ಕಂಡು ಬಂದಿರಲಿಲ್ಲ. ಈ ಬಗ್ಗೆ ದೂರುದಾರರ ಬಾಯಿ ಮುಚ್ಚಿಸುವ ಕೆಲಸದಲ್ಲಿ ಭೂ ದಂಧೆಕೋರರು ತಮ್ಮ ಪ್ರಭಾವದ ಮೂಲಕ ಬಹುತೇಕ ಯಶಸ್ವಿಯಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಅತ್ತೂರು ಮೀಸಲು ಅರಣ್ಯಕ್ಕೆ ಹೊಂದಿಕೊAಡಿರುವ ಈ ಸುಣ್ಣದ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ ಸಂಬAಧಿಸಿದ ಇಲಾಖೆಗಳ ಮೂಲಕ ಹೂಳು ತೆರವು ಮಾಡುವ ಕಾರ್ಯ ನಡೆಯಬೇಕಿತ್ತು. ಸ್ಥಳೀಯ ಕೆಲವು ಮಂದಿ ಒಳ ಒಪ್ಪಂದ ಮಾಡಿಕೊಂಡು ಕೆರೆಯಂಗಳದ ಸಾವಿರಾರು ಲೋಡುಗಳಷ್ಟಿರುವ ಮಣ್ಣನ್ನು ಮಾರಾಟ ಮಾಡುತ್ತಿದ್ದ ವಿಷಯ ತಿಳಿದಿದ್ದರೂ ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇದೀಗ ೬ ತಿಂಗಳ ನಂತರ ನಾಮಕಾವಸ್ತೆಗೆ ಮೂರು ಮಂದಿ ತಪ್ಪಿತಸ್ಥರ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ಹೂಡಿರುವುದು ಮಾತ್ರ ಸುದ್ದಿಯಾಗಿದೆ. ಕೆರೆಯಿಂದ ಮಣ್ಣು ತೆಗೆಯಲು ಬಳಸಿದ ಹಿಟಾಚಿ ಯಂತ್ರ ಬೃಹತ್ ಗಾತ್ರದ ಟಿಪ್ಪರ್ಗಳನ್ನು ವಶಪಡಿಸಿಕೊಳ್ಳದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್ ಮೂರೂ ಮಂದಿ ವಾಹನ ಮಾಲೀಕರ ಮೇಲೆ ದೂರು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದ ವಾಹನಗಳನ್ನು ವಶಪಡಿಸಿಕೊಂಡಿಲ್ಲ ಎಂದಿದ್ದಾರೆ.
ಅಕ್ರಮ ಮಣ್ಣು ಸಾಗಾಟ ಬಗ್ಗೆ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.
ಕೆರೆಯ ಒಳ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳೂ ಇದ್ದು ಮಣ್ಣು ತೆಗೆಯುವ ಕಾರಣ ಕಂಬಗಳು ಉರುಳಿ ಬೀಳುವ ಅಪಾಯ ಇದ್ದರು ಸಂಬAಧಿಸಿದ ಇಲಾಖೆಗಳು ಕೂಡ ಮೌನವಹಿಸಿರುವುದು ಇಲ್ಲಿ ಕಂಡು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಈ ಬಗ್ಗೆ ದೂರು ಬಂದ ಸಂದರ್ಭ ತಾನು ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದು ಇದು ಅರಣ್ಯ ಇಲಾಖೆಗೆ ಸಂಬAಧಿಸಿದ ಊರುಡುವೆ ಜಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ನಾಲೆ ಬದಿಗಳಿಂದ ಕೂಡ ನೂರಾರು ಲೋಡುಗಳಷ್ಟು ಮಣ್ಣು ಅಕ್ರಮವಾಗಿ ಸಾಗಿಸಿರುವ ಬಗ್ಗೆ ಕೂಡ ಇತ್ತೀಚೆಗೆ ಶಕ್ತಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿರುವುದನ್ನು ಸ್ಮರಿಸಬಹುದು. ಕುಶಾಲನಗರ ವ್ಯಾಪ್ತಿಯ ಹಲವೆಡೆ ತಗ್ಗು ಪ್ರದೇಶಗಳಿಗೆ ಸಾವಿರಾರು ಲೋಡ್ಗಳಷ್ಟು ಮಣ್ಣು ತುಂಬಿಸಿ ವಾಣಿಜ್ಯ ಬಡಾವಣೆಗಳಾಗಿ ಪರಿವರ್ತನೆ ಮಾಡುತ್ತಿರುವುದು ಇತ್ತೀಚಿನ ಆತಂಕಕಾರಿ ಬೆಳವಣಿಗೆಯಾಗಿದೆ.
ಇದರಿಂದ ಪ್ರತಿ ವರ್ಷದ ಮಳೆಗಾಲದ ಅವಧಿಯಲ್ಲಿ ಕಾವೇರಿ ನದಿ ಪ್ರವಾಹದ ಭೀತಿಯಲ್ಲಿ ತಗ್ಗು ಪ್ರದೇಶದ ಜನತೆ ಬದುಕು ಸಾಗಿಸುವಂತಾಗಿದೆ.
ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಕೊಪ್ಪ ಮತ್ತಿತರ ವ್ಯಾಪ್ತಿಯಲ್ಲಿ ಕೂಡ ತಗ್ಗು ಪ್ರದೇಶಗಳಲ್ಲಿ ಸಾವಿರಾರು ಲೋಡ್ಗಳಷ್ಟು ಮಣ್ಣು ತುಂಬಿಸಿ ಪ್ರಕೃತಿಗೆ ವಿರುದ್ಧವಾಗಿ ಅಭಿವೃದ್ಧಿ ಸಾಗುತ್ತಿರುವುದು ಕೂಡ ಆತಂಕಕಾರಿ ಬೆಳವಣಿಗೆ.
ಕೆರೆಯಿಂದ ಮಣ್ಣು ಸಾಗಿಸಿರುವ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಅವರು ಈ ಕೆರೆ ಅರಣ್ಯ ಇಲಾಖೆಗೆ ಸಂಬAಧಿಸಿದ ಹಿನ್ನೆಲೆಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕೂಡ ಸಾರ್ವಜನಿಕರ ಮೂಲಕ ದೂರು ನೀಡಲಾಗಿದ್ದು ಅಕ್ರಮವಾಗಿ ಮಣ್ಣು ಸಾಗಾಟದ ಬಗ್ಗೆ ಸಮಗ್ರ ರೀತಿಯ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಹಾಗೂ ಈ ಪ್ರಕರಣಕ್ಕೆ ಸಂಬAಧಿಸಿದAತೆ ಬಳಕೆ ಮಾಡಿರುವ ವಾಹನಗಳನ್ನು ವಶಪಡಿಸಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.