ಚೆಯ್ಯಂಡಾಣೆ, ಸೆ. ೧೨: ರಾಷ್ಟಿçÃಯ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಕರಡ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಡಂಗ ಆಯುಷ್ ಆರೋಗ್ಯ ಕೇಂದ್ರ ಹಾಗೂ ಕ್ಷೇಮ ಕೇಂದ್ರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯೆ ನೇತ್ರಾವತಿ ಉದ್ಘಾಟಿಸಿ ಮಾತನಾಡಿ, ಸೊಪ್ಪು, ತರಕಾರಿಗಳನ್ನು ಸೇವಿಸುವುದು ಅರೋಗ್ಯಕ್ಕೆ ಒಳ್ಳೆಯದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಡಂಗ ಆಯುಷ್ ಆರೋಗ್ಯ ಕೇಂದ್ರದ ಡಾ-ಶೈಲಜಾ ಪೌಷ್ಟಿಕ ಆಹಾರದ ಬಗ್ಗೆ ಮನೆ ಮದ್ದು ಹಾಗೂ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತೆ ಪುಷ್ಪಲತಾ ಮಾತನಾಡಿ, ಪೋಷಣ್ ಮಾಸಾಚರಣೆಯ ಮೂಲ ಉದ್ದೇಶ ತಾಯಿ, ಮಗುವಿನ ಮರಣವನ್ನು ತಪ್ಪಿಸುವುದು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ಎಂದರು.ಈ ಸಂದರ್ಭ ಆಯುಷ್ ಕೇಂದ್ರದ ಸಿಂಧು, ಲತಾ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಪೂಜಾ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ, ಗ್ರಂಥಪಾಲಕಿ ರೆನಿ ಬಿಬು, ಅಂಗನವಾಡಿ ಕಾರ್ಯಕರ್ತೆ ಈಶ್ವರಿ, ಗರ್ಭಿಣಿ ಸ್ತಿçÃಯರು, ಪೋಷಕರು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಈಶ್ವರಿ ಸ್ವಾಗತಿಸಿ ನಿರೂಪಿಸಿ, ರೆನಿ ಬಿಬು ವಂದಿಸಿದರು.