ಕೊಡ್ಲಿಪೇಟೆ, ಸೆ. ೧೨: ಕೊಡ್ಲಿಪೇಟೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡು ಅನುದಾನ ಬಿಡುಗಡೆಗೊಳಿಸಬೇಕೆಂದು ಈ ಭಾಗದ ಸಂಘ ಸಂಸ್ಥೆಗಳ ಪ್ರಮುಖರು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖಾ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಸಚಿವರು ಕೊಡ್ಲಿಪೇಟೆ ವಿದ್ಯಾಸಂಸ್ಥೆಗೆ ಅನೌಪಚಾರಿಕ ಭೇಟಿ ನೀಡಿದ ಸಂದರ್ಭ, ಕಾಂಗ್ರೆಸ್ ರಾಜ್ಯ ಮುಖಂಡರು, ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಸಂW Àಸಂಸ್ಥೆಗಳ ಪರವಾಗಿ ಪ್ರಮುಖರು ಬಸ್ ನಿಲ್ದಾಣ ಹಾಗೂ ಬಸ್ ಡಿಪೋ ಮತ್ತು ರೂಟ್ಗಳಿಗೆ ಹೊಸ ಬಸ್ಗಳನ್ನು ಕೋರಿ ಮನವಿ ಸಲ್ಲಿಸಿದರು.
ಈ ಬಗ್ಗೆ ಪರಿಶೀಲಿಸಿ ಸರಕಾರಿ ಜಮೀನಿನ ಲಭ್ಯಕ್ಕನುಸಾರ ನೂತನ ಬಸ್ ನಿಲ್ದಾಣಕ್ಕೆ ಯೋಜನೆ ರೂಪಿಸುವುದಾಗಿ ಸಚಿವರು ಭರವಸೆ ನೀಡಿದರು. ಈ ಬಗ್ಗೆ ಗಮನಹರಿಸುವುದಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಚಂದ್ರಮೌಳಿ ಅವರ ಮನವಿ ಮೇರೆಗೆ ಮುಂಜಾನೆ ೪ ಗಂಟೆಗೆ ಬೆಂಗಳೂರಿಗೆ ಬಸ್ ಸಂಚಾರ ನೂತನ ವ್ಯವಸ್ಥೆ ಕಲ್ಪಿಸಿದ ಸಚಿವರನ್ನು ಸಂಘ ಸಂಸ್ಥೆಗಳ ಪರವಾಗಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯತೀಶ್ ಕುಮಾರ್, ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಡಾ. ಉದಯ್ ಕುಮಾರ್, ಕಾರ್ಯದರ್ಶಿ ಪರಮೇಶ್ ,ನಿರ್ದೆಶಕರಾದ ಶಂಭು ಲಿಂಗಪ್ಪ, ಬಿ.ಕೆ.ಯತೀಶ್, ಪ್ರಮುಖರಾದ ಔರಂಗಜೇಬ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಹನೀಫ್, ಮುಖಂಡರಾದ ಜನಾರ್ದನ್, ಸುಲೈಮಾನ್, ವೇದ್ಕುಮಾರ್, ನಿಸಾರ್, ಹೆಚ್.ಜೆ. ಪ್ರವೀಣ್, ನಾಗರಿಕ ಸಮಿತಿಯ ಜಿ.ಆರ್. ಸುಬ್ರಮಣ್ಯ ಸೇರಿದಂತೆ ವಿದ್ಯಾಸಂಸ್ಥೆಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು , ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಜರಿದ್ದರು.