ವೀರಾಜಪೇಟೆ, ಸೆ. ೧೧: ಕೊಡಗು ಎಜುಕೇಶನ್ ಮತ್ತು ಸೋಶಿಯಲ್ ಸರ್ವೀಸ್ ಟ್ರಸ್ಟ್ ವತಿಯಿಂದ ವಿರಾಜಪೇಟೆ ಕೊಡವ ಸಮಾಜದ ತ್ರಿವೇಣಿ ಶಾಲೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು.

೨೦೦೮ ರಲ್ಲಿ ಆರಂಭಗೊAಡ ಟ್ರಸ್ಟ್ನ ವತಿಯಿಂದ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ಬಡತನದಲ್ಲಿರುವ ಕೊಡವ ಕುಟುಂಬದ ಸುಮಾರು ೧೧೭ ಮಕ್ಕಳಿಗೆ ಸುಮಾರು ಇಪ್ಪತ್ತು ಲಕ್ಷ ರೂಪಾಯಿಯನ್ನು ನೀಡಲಾಯಿತು.

ಟ್ರಸ್ಟ್ನ ಗೌರವ ಕಾರ್ಯದರ್ಶಿ ಗಣೇಶ್ ಮಾಹಿತಿ ನೀಡಿ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ನಾಲ್ಕು ಕುಟುಂಬಕ್ಕೆ ದನದ ಕೊಟ್ಟಿಗೆ ಸಮೇತ ಹಸುಗಳನ್ನು ನೀಡಿದ್ದೇವೆ. ಮುಚ್ಚುವ ಹಂತದಲ್ಲಿದ್ದ ಒಂದು ವಿದ್ಯಾಸಂಸ್ಥೆಯನ್ನು ನಮ್ಮ ಸಂಸ್ಥೆ ಅಭಿವೃದ್ದಿಪಡಿಸಿ ಆ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹದಿಮೂರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಅಲ್ಲದೆ ರಾಜ್ಯ ಮಟ್ಟದ ಕ್ರಾಸ್ ಕೌಂಟಿ ಪಂದ್ಯಾಟವನ್ನು ಯಶಸ್ವಿಯಾಗಿ ನಿರ್ವಹಿಸಿಸಲಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ ಮಾತನಾಡಿ ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಟ್ರಸ್ಟ್ನಿಂದ ಚೆಕ್ ಪಡೆದುಕೊಂಡ ನಂತರ ಈ ಸಂಸ್ಥೆಯನ್ನು ಮರೆಯಬಾರದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಮಂದAಪAಡ ರಜನಿ ಚಂಗಪ್ಪ ಮಾತನಾಡಿ ವಿದ್ಯಾರ್ಥಿಗಳು ಮುಂದೆ ತಾನು ಯಾವ ರೀತಿ ವಿದ್ಯೆಯನ್ನು ಮುಂದುವರಿಸಬಹುದು ಎಂದು ಮೊದಲೇ ತಮ್ಮ ಮನಸ್ಸಿನಲ್ಲಿ ನಿರ್ಧಾರ ಮಾಡಿಕೊಳ್ಳಬೇಕು. ಧೈರ್ಯವಾಗಿ ಮುನ್ನುಗ್ಗಬೇಕು, ಇದರಿಂದ ವಿದ್ಯೆಯಲ್ಲಿ ನಿಮಗೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತ್ರಿವೇಣಿ ಸಂಸ್ಥೆಯ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ ಮಾತನಾಡಿ ಸರಕಾರ ಮಾಡುವ ಕಾರ್ಯವನ್ನು ಈ ಟ್ರಸ್ಟ್ ಮಾಡುತ್ತಿದೆ, ಈ ಟ್ರಸ್ಟ್ನಿಂದ ಸಹಾಯ ಪಡೆದು ಉತ್ತಮ ಭವಿಷ್ಯ ರೂಪುಗೊಂಡ ನಂತರ ಮರಳಿ ತನ್ನ ಕೈಲಾದ ಸಹಾಯವನ್ನು ನೀಡಬೇಕು ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಟ್ರಸ್ಟ್ನ ಅಧ್ಯಕ್ಷರಾದ ಮಂದAಪAಡ ಕೆ. ಚೆಂಗಪ್ಪ, ಕೇಕಡ ಮಂದಣ್ಣ, ಪಂದ್ಯAಡ ಸೂರಜ್ ಮಾಚಯ್ಯ, ಪಟ್ಟಡ ಧನು ಉತ್ತಯ್ಯ, ಮಲ್ಲಂಡ ಬೋಪಯ್ಯ, ಈ ವರ್ಷದ ಟ್ರಸ್ಟ್ ವತಿಯಿಂದ ನೀಡಲಾದ ಇಪ್ಪತ್ತು ಲಕ್ಷ ರೂಪಾಯಿಯ ಚೆಕ್‌ಗಳನ್ನು ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಶಾಲೆ ಹಾಗೂ ಕಾಲೇಜುಗಳಿಗೆ ನೀಡಿದರು.