ಕರಿಕೆ, ಸೆ. ೧೧: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಕುಡಿಯಂಗಲ್ ಎಂಬಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ನಿಲ್ಲಿಸಿದ ಜೀಪೊಂದು ತನ್ನಿಂದ ತಾನೆ ಚಾಲನೆಗೊಂಡು ಸಮೀಪದ ತೋಟಕ್ಕೆ ಉರುಳಿಬಿದ್ದ ಘಟನೆ ನಡೆದಿದೆ. ಬೆನ್ನಿ ಎಂಬವರಿಗೆ ಸೇರಿದ (ಕೆಎಲ್‌೦೨ ಡಿ೪೩೫೭) ಜೀಪನ್ನು ನಿಲ್ಲಿಸಿ ಸ್ಥಳದಿಂದ ತೆರಳಿದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಜೀಪಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.