ಚೆಯ್ಯಂಡಾಣೆ, ಸೆ. ೧೧: ಈದ್ಮಿಲಾದ್ ಆಚರಣೆಯ ಅಂಗವಾಗಿ ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ಗ್ರಾಮಸ್ಥರು ರಸ್ತೆಯ ಇಕ್ಕೆಲಗಳಲ್ಲಿ ಆವರಿಸಿದ್ದ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ತಾ. ೧೬ ರಂದು ನಾಡಿನೆಲ್ಲೆಡೆ ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮದಿನಾಚರಣೆ ಪ್ರಯುಕ್ತ ಕಲ್ಲುಮೊಟ್ಟೆ ಗ್ರಾಮದ ರಸ್ತೆಯ ಮೂಲಕ ವಿದ್ಯಾರ್ಥಿಗಳ ಜಾಥಾ ನಡೆಯಲಿದೆ. ಇದಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಕಾಡುಗಳು ರಸ್ತೆಗೆ ಆವೃತವಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುವುದನ್ನು ಗಮನಿಸಿದ ಗ್ರಾಮಸ್ಥರು ತಮ್ಮ ಒಂದು ದಿನದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಸ್ತೆಯ ಬದಿಗಳಲ್ಲಿ ಆವೃತವಾಗಿದ್ದ ಕಾಡುಗಳನ್ನು ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಕಲ್ಲ್ಲುಮೊಟ್ಟೆ ಗ್ರಾಮಸ್ಥರಾದ ಪೀರು ಸಾಹೆಬ್, ರಝಾಕ್, ಅಶ್ರಫ್, ಹನೀಫ್, ಪುಲಿಯಂಡ ಝಕರಿಯ ಮತ್ತಿತರರು ಪಾಲ್ಗೊಂಡಿದ್ದರು.