ಸೋಮವಾರಪೇಟೆ, ಸೆ. ೧೧: ರೋಟರಿ ಸೋಮವಾರಪೇಟೆ ಹಿಲ್ಸ್ ವತಿಯಿಂದ ಸಮೀಪದ ಹಾನಗಲ್ಲು ಗ್ರಾಮದ ಅಂಗನವಾಡಿ ಹಾಗೂ ಶಾಲೆಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಯಿತು.
ಅಂಗನವಾಡಿಗೆ ೧೦ ಚೇರ್ಗಳು, ಸ್ಟೀಲ್ ತಟ್ಟೆ ಮತ್ತು ಲೋಟಗಳು, ಆಟದ ಚೆಂಡುಗಳು, ಕಲಿಕೆಯ ಚಾರ್ಟ್ಗಳನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭ ರೋಟರಿ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ, ಜೋನಲ್ ಲೆಫ್ಟಿನೆಂಟ್ ಪ್ರಕಾಶ್ ಕುಮಾರ್, ಪದಾಧಿಕಾರಿಗಳಾದ ಎಸ್.ಬಿ. ಯಶವಂತ್, ಬಿ.ಎಂ. ದಿನೇಶ್, ಕೆ.ಪಿ. ಪ್ರವೀಣ್, ಸವಿತಾ, ಅಂಗನವಾಡಿ ಶಿಕ್ಷಕಿ ಶಾರದ, ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ, ಸದಸ್ಯೆ ಉಷಾ, ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.