ಮಡಿಕೇರಿ, ಸೆ. ೧೦ ಮರಂದೋಡ ಗ್ರಾಮದ ಮೇರಿಯಂಡ ಐನ್ ಮನೆಯಲ್ಲಿ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸಲಾಯಿತು. ಕೋವಿ, ಒಡಿಕತ್ತಿ ಹಾಗೂ ಈಟಿಯನ್ನು ಪೂಜಿಸಿ ಗುರು ಕಾರೋಣರ ಆಶೀರ್ವಾದ ಪಡೆಯಲಾಯಿತು. ಕುಟುಂಬದ ಹಿರಿಯ ಹಾಗೂ ಕಿರಿಯರು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡರು. ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಸಂಗೀತ ಕುರ್ಚಿ, ಕಾಳು ಹೆಕ್ಕುವ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.