ಮಡಿಕೇರಿ, ಸೆ. ೧೦: ಕಾಕೋಟು ಪರಂಬು ಮೈದಾನದಲ್ಲಿ ಕೈಲ್‌ಪೊಳ್ದ್ ಅಂಗವಾಗಿ ಸಂಭ್ರಮದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಲ್ಲಿನ ಕೈಲ್‌ಮುಹೂರ್ತ ಸಂಘದ ವತಿಯಿಂದ ವರ್ಷಂಪ್ರತಿ ಹಬ್ಬದ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ಇತರ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷವೂ ಜನರು ಸಂಭ್ರಮದಿAದ ಭಾಗಿಗಳಾಗಿದ್ದರು.

ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಿತು. ಇದರೊಂದಿಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕ್ರೀಡಾಸ್ಪರ್ಧೆಗಳು ಜರುಗಿದವು. ಕೈಲ್ ಮುಹೂರ್ತ ಸಂಘದ ಅಧ್ಯಕ್ಷ ಮಂಡೇಟಿರ ಎಂ. ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕಾಕೋಟು ಪರಂಬು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೂಳಂಡ ವಿನು ಪೆಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಅತಿಥಿಗಳಾಗಿದ್ದ ಪರದಂಡ ಸುಬ್ರಮಣಿ ಅವರು ಮಾತನಾಡಿ, ಕಾಕೋಟು ಪರಂಬುವಿನಲ್ಲಿ ಸರ್ವರನ್ನೂ ಸೇರಿಸಿಕೊಂಡು ಕ್ರೀಡಾಕೂಟ ನಡೆಸುತ್ತಿರುವುದು ಶ್ಲಾಘನೀಯ. ಕೊಡಗಿನಲ್ಲಿ ಯಾವುದೇ ಜನಾಂಗದವರೂ ಮುಕ್ತವಾಗಿ ಭಾಗವಹಿಸುವಂತಹ ಕ್ರೀಡಾಕೂಟ ವಿವಿಧ ಮನರಂಜನೆ, ವಿವಿಧ ಆಟೋಟಗಳೊಂದಿಗೆ ಅಬಾಲ ವೃದ್ಧರನ್ನು ಸೆಳೆಯುವಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಕೊಡವರ ಭಾವೈಕ್ಯತೆಯನ್ನು ಬಿಂಬಿಸುವಲ್ಲಿ ಇದು ಯಶಸ್ವಿಯಾಗಿದೆ.

ಕೊಡವರು ಕೇವಲ ಶೌರ್ಯ, ಧೈರ್ಯ, ರಾಷ್ಟçಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ನಮಗೆ ಎಲ್ಲರೂ ಬೇಕು. ಸುತ್ತಮುತ್ತಲ ಎಲ್ಲಾ ಸಮುದಾಯಗಳಿಂದ ಪ್ರೀತಿ, ಪ್ರೇಮ, ಸಾಮರಸ್ಯ ಬಯಸುತ್ತೇವೆ. ಇತ್ತೀಚೆಗೆ ಎಲ್ಲಾ ಸಮುದಾಯಗಳು ತಂತಮ್ಮ ಸಮುದಾಯಗಳಿಗಾಗಿಯೇ ಕ್ರೀಡಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಕಂಡಿದ್ದೇವೆ. ಆದರೆ ಕಾಕೋಟು ಪರಂಬುವಿನಲ್ಲಿ ಕ್ರೀಡಾಸಮಿತಿ ಎಲ್ಲಾ ಜನಾಂಗಗಳನ್ನು ಒಗ್ಗೂಡಿಸಿ ಹಲವಾರು ವರ್ಷಗಳಿಂದ ಈ ಕ್ರೀಡೆಗಳನ್ನು ಆಯೋಜಿಸುತ್ತಾ ಬಂದಿರುವುದು ಉತ್ತಮ ಉದಾರಣೆಯಾಗಿದೆ ಎಂದರು.

ಕಾಕೋಟುಪರAಬುವಿನ ಈ ಸುಂದರ ಪರಿಸರವನ್ನು ನಿವೇಶನ ಗಳನ್ನಾಗಿ ಮಾಡಲು ಈ ಹಿಂದೆ ಪ್ರಯತ್ನ ನಡೆದಿತ್ತು. ಗ್ರಾಮದ ಜನತೆ ಒಗ್ಗೂಡಿ ಸರಕಾರದ ಗಮನ ಸೆಳೆದು ದೇವರ ಹೆಸರಿನಲ್ಲಿ ಗೋಮಾಳ ನಿರ್ಮಿಸಿತು. ಹಾಗಾಗಿ ಇಂದಿಗೂ ಇದು ದೇವರ ಹೆಸರಿನಲ್ಲಿ ಉಳಿದು ಕೊಂಡಿದೆ. ಇದಕ್ಕಾಗಿ ನಾವೆಲ್ಲರೂ ಕಾಕೋಟುಪರಂಬುವಿನ ಗ್ರಾಮಸ್ಥರಿಗೆ ಆಭಾರಿಯಾಗುತ್ತೇವೆ ಎಂದರು.