ಕುಶಾಲನಗರ, ಸೆ. ೧೦ : ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯಕ್ಕೆ ಹೊಂದಿಕೊAಡಿರುವ ಸುಣ್ಣದ ಕೆರೆ ಜಾಗದ ಸರ್ವೆ ನಂಬರ್ ೧/೧ ರ ಜಾಗದಲ್ಲಿ ಅಕ್ರಮವಾಗಿ ಹೂಳು ತೆಗೆದ ಆರೋಪವಿದೆ. ಮೂರು ಮಂದಿಯ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಬೊಳ್ಳೂರು ಗ್ರಾಮದ ಸಿ.ಆರ್. ದಿನು, ಟಿ.ಬಿ. ಸತೀಶ ಮತ್ತು ದೊಡ್ಡತ್ತೂರು ಗ್ರಾಮದ ವಾಸು ಎಂಬವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.