ಮಡಿಕೇರಿ, ಸೆ. ೧೦: ಮರಗೋಡಿನಲ್ಲಿ ನೆಲೆಸಿರುವ ಕ್ರಿಯಾತ್ಮಕ ಕಲಾವಿದ ರೂಪೇಶ್ ನಾಣಯ್ಯ ಅವರು ರಚಿಸಿರುವ ಜಲವರ್ಣವೊಂದಕ್ಕೆ ರಾಷ್ಟಿçÃಯ ಪ್ರಶಸ್ತಿ ದೊರೆತಿದೆ.
ಹಾಕತ್ತೂರಿನ ಕ್ಷೌರಿಕರೊಬ್ಬರ ಅಂಗಡಿಯಲ್ಲಿ ನಿತ್ಯ ಪತ್ರಿಕೆ ಓದುತ್ತಾ, ರಸ್ತೆಹೋಕರನ್ನು ವೀಕ್ಷಿಸುತ್ತಾ ಕೂರುವ ವೃದ್ಧರೊಬ್ಬರನ್ನು ರೂಪೇಶ್ ನಾಣಯ್ಯ ಚಿತ್ರಿಸಿದ್ದರು. ‘‘ಎನ್ವಿಸೇಜ್’’ - ‘‘ಊಹನೆ’’ ಎಂಬ ಶೀರ್ಷಿಕೆ ಯೊಂದಿಗೆ ಜೋದ್ಪುರದಲ್ಲಿ ನಡೆದ ಅಖಿಲ ಭಾರತ ‘‘ಈಸ್ಟರ್ನ್ ಫೌಂಡೇಶನ್ ಆಫ್ ಆರ್ಟ್ ಎಂಡ್ ಕಲ್ಚರ್’’ ಸಂಘಟನೆ ಏರ್ಪಡಿಸಿದ್ದ ರಾಷ್ಟಿçÃಯ ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಕಳುಹಿಸಿದ್ದರು. ಈ ತಿಂಗಳ ೧೨ ರಿಂದ ೧೫ರ ತನಕ ನಡೆಯುತ್ತಿರುವ ಪ್ರದರ್ಶನ ಸ್ಪರ್ಧೆಯಲ್ಲಿ ಈ ಜಲವರ್ಣ ಚಿತ್ರವು ‘‘ಹೆÀÊಲಿ ಕಮೆಂಡೇಬಲ್ ಅವಾರ್ಡ್’’ ಪಡೆದಿದೆ. ಸುಮಾರು ೨೫೦ ಚಿತ್ರಗಳು ಪ್ರದರ್ಶಿಸಲ್ಪಡುತ್ತಿದೆ.
ರೂಪೇಶ್ ನಾಣಯ್ಯ ಅವರು ಈ ಹಿಂದೆ ಬಿಡಿಸಿದ್ದ ಮೀನು ಮಾರಾಟ ಮಾಡುವ ಪಾತುಕುಟ್ಟಿ ಎಂಬಾಕೆಯ ಚಿತ್ರ ಇಟಲಿಯಲ್ಲಿ ನಡೆದ ಅಂತರರಾಷ್ಟಿçÃಯ ಪ್ರದರ್ಶನದಲ್ಲಿ ಪ್ರಶಸ್ತಿ ಗಳಿಸಿತ್ತು. ವಿಶ್ವದೆಲ್ಲೆಡೆಯಿಂದ ಸುಮಾರು ೫೦೦ ಹಾಗೂ ಭಾರತದಿಂದ ೨೦ ಚಿತ್ರಗಳು ಅಲ್ಲಿ ಪ್ರದರ್ಶಿಸಲ್ಪಟ್ಟಿದ್ದವು. ಪಾತುಕುಟ್ಟಿಯ ಜಲವರ್ಣ ಚಿತ್ರ ಅಂಚೆ ಇಲಾಖೆಯಿಂದ ಪ್ರಥಮ ಲಕೋಟೆ ಆಗಿಯೂ ಬಿಡುಗಡೆಗೊಂಡಿತ್ತು.