ಮಡಿಕೇರಿ, ಸೆ. ೯: ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳು ನಡೆಯಲಿದೆ.
ತಾ.೧೦ರಂದು ಬೆಳಿಗ್ಗೆ ೧೦.೩೦ಕ್ಕೆ ನಾಲಡಿ ವಾರ್ಡ್ ಸಭೆ ಸದಸ್ಯ ಕೋಡಿಮಣಿಯಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಕಕ್ಕಬೆ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ, ತಾ.೧೧ ರಂದು ಬೆಳಿಗ್ಗೆ ೧೦.೩೦ಕ್ಕೆ ಕಕ್ಕಬೆಯ ವಿಎಸ್‌ಎಸ್‌ಎನ್ ಹೊಸ ಸಭಾಂಗಣದಲ್ಲಿ ಯವಕಪಾಡಿ ವಾರ್ಡ್ ಸಭೆ ಕೆ.ಕೆ. ಪ್ರಕಾಶ್ ಅಧ್ಯಕ್ಷತೆಯಲ್ಲಿ, ತಾ.೧೨ ರಂದು ಬೆಳಿಗ್ಗೆ ೧೦.೩೦ಕ್ಕೆ ಸಿ.ಎ. ಮೊಣಪ್ಪ ಅಧ್ಯಕ್ಷತೆಯಲ್ಲಿ ಮರಂದೋಡ ವಾರ್ಡ್ ಸಭೆ ಮರಂದೋಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.