ಮಡಿಕೇರಿ ಸೆ.೯ : ಸ್ಥಳೀಯರು ನಡೆಸುವ ಪರಿಸರ ಸ್ನೇಹಿ, ಜನಪದ ಸ್ನೇಹಿ ಹೋಂಸ್ಟೇಗಳನ್ನು ಧಮನಿಸಲು ಮತ್ತು ಕೊಡವ ರೈತರನ್ನು ಹಣಿಯಲು ಸಂಚು ರೂಪಿಸಲಾಗುತ್ತಿದೆ. ಹೊರಗಿನ ಬಂಡವಾಳಶಾಹಿಗಳ ರೆಸಾರ್ಟ್ಗಳಿಗೆ, ದೊಡ್ಡ ದೊಡ್ಡ ಕಂಪೆನಿಗಳ ಯೋಜನೆ ಗಳಿಗೆ ಅನುಮತಿ ನೀಡುವ ಮೂಲಕ ಸರ್ಕಾರ ಪ್ರಕೃತಿ ವಿನಾಶಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಕೊಡವ ನ್ಯಾಷ ನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.
ಜಿಲ್ಲೆಯ ವಿವಿಧೆಡೆ ನಡೆಯುತ್ತಿ ರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸ ಬೇಕೆಂದು ಒತ್ತಾಯಿಸಿ ಸಿಎನ್ಸಿ ವತಿಯಿಂದ ನಾಪೋಕ್ಲುವಿನಲ್ಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಆದಿಮಸಂಜಾತ ಕೊಡವ ಬುಡ ಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂ ವಿಲೇವಾರಿ ಮಾಫಿಯಾಗಳು ಹಾಗೂ ಕಪುö್ಪಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ನ್ನು ನಾಶ ಮಾಡುತ್ತಿವೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲಾ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾಕಟಾಕ್ಷವಿದೆ. ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು..
ಕೆಲವು ದಿನಗಳ ಹಿಂದೆ ರಾಷ್ಟಿçÃಯ ಹೆದ್ದಾರಿಯ ಕುಟ್ಟ ಸಮೀಪದ ಪೂಜೆಕಲ್ಲು ಗ್ರಾಮದಲ್ಲಿ ಜಲಗರ್ಭ ಮತ್ತು ಭೂಗರ್ಭ ಸ್ಫೋಟವಾಗಿದೆ. ಇಲ್ಲಿ ಸಂಭವಿಸಿರುವ ಅನಾಹುತ ಲಕ್ಷ÷್ಮಣ ತೀರ್ಥ ವ್ಯಾಪ್ತಿಗೂ ವ್ಯಾಪಿಸಿ ಕ್ರಮೇಣ ಇಡೀ ಕೊಡಗಿಗೆ ಅನಾಹುತ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಕೊಡವ ಲ್ಯಾಂಡ್ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್ಸಿ ಸಂಘಟನೆ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ ಎಂದು ದೂರಿದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ``ಕೊಡವ ಲ್ಯಾಂಡ್'' ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ನಾಪೋಕ್ಲುವಿನಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿಯಲ್ಲಿ ಕಲಿಯಂಡ ಮೀನಾ, ಅಪ್ಪಚ್ಚಿರ ರೀನಾ, ನೆರವಂಡ ಮೀರಾ, ಪುಲ್ಲೆರ ಪದ್ಮಿನಿ, ಕರವಂಡ ಸರ್ಸು, ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಆಳ್ಮಂಡ ಜೈ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಅಪ್ಪಾರಂಡ ಪ್ರಸಾದ್, ಮಣೊಟೀರ ಜಗದೀಶ್, ಮಣೊಟಿರ ಸ್ವರೂಪ್, ಪಟ್ಟಮಾಡ ಅಶೋಕ್, ಕರವಂಡ ಲವ, ಕೇಟೋಳಿರ ಹರೀಶ್, ಅರೆಯಡ ರತ್ನ, ಅಪ್ಪಚೆಟ್ಟೋಳಂಡ ಮನು, ಕುಲ್ಲೇಟಿರ ಬೇಬ ಅರುಣ, ಕರವಂಡ ರವಿ, ಚೇನಂಡ ಗಿರೀಶ್, ಬಾಳೆಯಡ ಶಿವು, ಮಣೋಟಿರ ಪ್ರದೀಪ್, ಮಣೋಟಿರ ಅಪ್ಪಣ್ಣ, ಕೇಲೇಟಿರ ದೀಪು, ಕುಂಡ್ಯೋಳAಡ ಕಂದ, ಕುಂಡ್ಯೋಳAಡ ಸುಬ್ಬಯ್ಯ, ಕೈಬಿಲಿರ ಪ್ರಕಾಶ್, ಕೂಪದಿರ ಸಾಬು, ಅರೆಯಡ ಅಶೋಕ್, ನಾಯಕಂಡ ಬೋಪಣ್ಣ, ಕೇಟೋಳಿರ ಡಾಲಿ, ಕೊಂಡಿರ ಗಣೇಶ್, ಪೊರ್ಕೊಂಡ ಅನಿಲ್, ಚೀಯಕಪೂವಂಡ ರಘು, ಮೂವೆರ ವಿನು, ಕೆಟೋಳಿರ ಮಲ್ಲು, ಕೈಬಿಲಿರ ಸಾಬು, ತಿರೋಡಿರ ರಾಜ, ಚೀಯಕಪೂವಂಡ ಅಜಂತಾ, ಅರೆಯಡ ಕಿರಣ್, ಬಾಳೆಯಡ ರೋಶನ್, ಪುಲ್ಲೇರ ಸುನು, ಚೀಯಕಪೂವಂಡ ಸೂರಿ, ಮಣೋಟಿರ ಡಿಕ್ಕ, ಕೇಲೇಟಿರ ಡಿಕ್ಕ, ಬೊಪ್ಪಂಡ ಕವನ್, ಕುಲ್ಲೇಟಿರ ಲೋಕೇಶ್, ಕನ್ನಂಬಿರ ಸುಧಿ, ಕಂಗAಡ ಜಾಲಿ, ಕರವಂಡ ನಾಣಯ್ಯ, ಅಪುö್ಪಮಣಿಯಂಡ ಬನ್ಸಿ, ಕುಲ್ಲೇಟಿರ ಶಂಕರಿ, ಪಾಲೆಯಡ ಸಂತು, ಶಿವಚಾಳಿಯಂಡ ಅಂಬಿ, ನಾಯಕಂಡ ದೀಪು, ಕುಲ್ಲೇಟಿರ ಅಜಿತ್, ಶಿವಚಾಳಿಯಂಡ ಲವ, ಬಿದ್ದಾಟಂಡ ರೋಜಿ, ಪುಲ್ಲೆರ ಚಿಣ್ಣಪ್ಪ, ಬಾಚಮಂಡ ಬೆಲ್ಲು, ಬಿದ್ದಂಡ ವಿಜು, ಕೇಟೋಳಿರ ಶಮ್ಮಿ, ಕಂಗಾAಡ ಭೀಮಯ್ಯ, ಕಲಿಯಂಡ ದೀಪು, ಮೇಕಮಣಿಯಂಡ ಶಂಬು, ತೆಕ್ಕಬೊಟ್ಟೋಳಂಡ ಸೂರಿ, ಪುಲ್ಲೆರ ವಿನು ಸೇರಿದಂತೆ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.