ಕಣಿವೆ, ಸೆ. ೯: ಕುಶಾಲನಗರದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ನಾಡು ಕಂಡ ಹಿರಿಯ ಸಾಹಿತಿ, ಸಂಶೋಧಕ, ಪಕ್ಷಿ, ಪರಿಸರ ರಕ್ಷಕ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸ್ಮರಣೆ ಕಾರ್ಯಕ್ರಮ ಕೂಡ್ಲೂರು ಗ್ರಾಮದ ಟಿ.ಆರ್. ಶರವಣಕುಮಾರ್ ಅವರ ನಿವಾಸ "ಚಂದ್ರ ಕುಟೀರ" ದಲ್ಲಿ ನಡೆಯಿತು.

ವಿಚಾರವಾದಿ ಹಾಗೂ ವಾಗ್ಮಿ ವಿ.ಪಿ. ಶಶಿಧರ್ ಈ ಸಂದರ್ಭ ಮಾತನಾಡಿ, ಕುವೆಂಪು ಕಾಲಘಟ್ಟದಲ್ಲಿ ಕನ್ನಡನಾಡು ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕ ವಾಗಿ ಶ್ರೀಮಂತಗೊAಡಷ್ಟು ಇತ್ತೀಚಿನ ದಶಕಗಳಲ್ಲಿ ಕಾಣುತ್ತಿಲ್ಲ.

ಕುವೆಂಪು ಸಾಹಿತ್ಯಿಕವಾಗಿ ಗಗನದ ಎತ್ತರಕ್ಕೇರಿದಾಗ್ಯೂ ಅವರ ಪುತ್ರ ಪೂರ್ಣ ಚಂದ್ರತೇಜಸ್ವಿ ಅಪ್ಪನ ನೆರಳಿನಿಂದ ಹೊರಬಂದು ಸ್ವತಃ ತಾವೇ ಸಾಹಿತ್ಯ ರಚನೆಗಳಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದವರು. ಸಾಹಿತ್ಯದಷ್ಟೇ ಪಕ್ಷಿಗಳ ವೈವಿಧ್ಯತೆ ಹಾಗೂ ಪರಿಸರದ ಬಗ್ಗೆಯೂ ತೆತೇಜಸ್ವಿ ಒಡನಾಡಿಗಳು ಹಳ್ಳಿಗಳನ್ನು ತೊರೆದು ನಗರಗಳಿಗೆ ಆಕರ್ಷಿತರಾದರೆ ತೇಜಸ್ವಿ ನಗರ ತೊರೆದು ಹಳ್ಳಿಯ ಸುಂದರ ಪರಿಸರದತ್ತ ಒಲವು ಹೊಂದಿ ದ್ದರು ಎಂದು ಶಶಿಧರ್ ಹೇಳಿದರು.

ಆಶಯ ನುಡಿಗಳಾಡಿದ ಸಾಹಿತಿ ಕಣಿವೆ ಭಾರಧ್ವಜ್ ಆನಂದತೀರ್ಥ, ನೇರ ಹಾಗೂ ನಿಷ್ಟುರ ಸಾಹಿತಿಯಾಗಿದ್ದ ತೇಜಸ್ವಿಯವರ ನಡೆಯಲ್ಲಿ ಯಾವತ್ತೂ ನಾಟಕೀಯತೆ ಇರಲಿಲ್ಲ ಹಾಗೂ ತಂದೆ ಯನ್ನು ಅವರು ಅನುಸರಿಸಲೇ ಇಲ್ಲ. ಅವರಲ್ಲಿ ಸರಳತೆ ಇತ್ತು. ವಿಡಂಬನೆ, ವ್ಯಂಗ್ಯ, ತಮಾಷೆ ಎಲ್ಲವೂ ಇದ್ದವು.

ಒಮ್ಮೆ ಜೆ.ಹೆಚ್. ಪಟೇಲರು ತೇಜಸ್ವಿಗೆ ಕರೆ ಮಾಡಿ ನಿಮ್ಮನ್ನು ಎಂಎಲ್‌ಸಿ ಮಾಡಬೇಕಲ್ಲಾ ಎಂದಾಗ ಪಟೇಲ್‌ರನ್ನು ತರಾಟೆಗೆ ತೆಗೆದುಕೊಂಡಿ ದ್ದರು ಎಂದು ಮೆಲುಕು ಹಾಕಿದರು.

ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮೆ.ನಾ. ವೆಂಕಟನಾಯಕ್ ಮಾತನಾಡಿ, ಕುವೆಂಪು ಕಾಲಘಟ್ಟದ ಅವರ ಸಾಹಿತ್ಯ ಆಳುವ ಸರ್ಕಾರ ಗಳನ್ನು ನಡುಗಿಸುವಂತಿತ್ತು.

ಅAತಹ ಸಾಹಿತಿಯ ಮಗನಾಗಿದ್ದ ತೇಜಸ್ವಿ ಯಾವತ್ತೂ ತಮ್ಮ ತಂದೆಯನ್ನು Ãಜಸ್ವಿ ಹೆಚ್ಚಿನ ಒಲವು ಹೊಂದಿದ್ದರು. ಅನುಸರಿಸಲೂ ಇಲ್ಲ. ಅನುಕರಿಸಲೂ ಇಲ್ಲ ಎಂದರು.

ಟಿ.ಆರ್. ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ಯುವ ಜನಾಂಗ ಸಾಹಿತ್ಯ ವನ್ನು ಓದುವುದೇ ಮರೆಯಾಗಿದೆ. ತೇಜಸ್ವಿಯವರ ಸಾಹಿತ್ಯ ಜನಸಾ ಮಾನ್ಯರಿಗೆ ಅರ್ಥವಾಗುವ ಸರಳ ಹಾಗೂ ಆಡು ಭಾಷೆಯಲ್ಲಿದೆ ಎಂದರು.

ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕಿ ಶಾಂತಿ, ಅಥ್ಲೆಟಿಕ್ ತರಬೇತುದಾರ ವಸಂತಕುಮಾರ್ ಮಾತನಾಡಿದರು. ಕೆ.ಎಸ್. ಮಹೇಶ್, ಕುಶಾಲನಗರ ಗಣಪತಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್, ಹಿತರಕ್ಷಣಾ ವೇದಿಕೆಯ ಸಂಚಾಲಕ ಕೆ.ಜಿ. ಮನು, ಉಪನ್ಯಾಸಕ ಎಂ. ನಂಜುAಡಸ್ವಾಮಿ, ಪುರಸಭೆ ಸದಸ್ಯೆ ಜಯಲಕ್ಷಿö್ಮ, ಮೊಗಣ್ಣೇಗೌಡ, ದೇವರಾಜು, ರಾಜೇಶ್, ಚಂದ್ರು, ಮೋಹಿದ್ಧೀನ್ ಇತರರಿದ್ದರು.