ಸಿದ್ದಾಪುರ, ಸೆ. ೯: ಕಾಡಾನೆಗಳು ದಾಳಿ ನಡೆಸಿ ದೇವಾಲಯಕ್ಕೆ ಸೇರಿದ ಕೊಠಡಿಯನ್ನು ಹಾನಿಗೊಳಿಸಿರುವ ಘಟನೆ ಸಿದ್ಧಾಪುರ ಸಮೀಪದ ಘಟ್ಟದಳದ ಶಿಲ್ಪಿ ಕಾಫಿ ತೋಟದೊಳಗೆ ಸೋಮವಾರದಂದು ನಡೆದಿದೆ.

ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಕರಡಿಗೋಡು ಸಮೀಪದ ಘಟ್ಟದಳದ ಶಿಲ್ಪಿ ಕಾಫಿ ತೋಟದೊಳಗೆ ಇರುವ ಶ್ರೀ ಚಾಮುಂಡೇಶ್ವರಿ ದೇವಾಲಯದ ಬದಿಯಲ್ಲಿರುವ ದೇವಾಲಯಕ್ಕೆ ಸೇರಿದ ಕೊಠಡಿಯ ಮೇಲೆ ಕಾಡಾನೆಗಳು ದಾಳಿ ನಡೆಸಿ ಕೊಠಡಿಯ ಬಾಗಿಲನ್ನು ಮುರಿದು ಮೇಲ್ಛಾವಣಿಯ ಮರ ಹಾಗೂ ಹೆಂಚುಗಳನ್ನು ಎಳೆದು ಹಾಕಿ ಹಾನಿಗೊಳಿಸಿವೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಧ್ಯಾಹ್ನ ೧೨ ಗಂಟೆ ವೇಳೆ ಈ ಘಟನೆ ಸಂಭವಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಈ ಭಾಗದಲ್ಲಿ ಸುತ್ತಾಡುತ್ತಿದ್ದು, ಹಾಡಹಗಲೇ ದೇವಾಲಯಕ್ಕೆ ಸೇರಿದ ಕೊಠಡಿಯನ್ನು ಹಾನಿಗೊಳಿಸಿರುವ ಬಗ್ಗೆ ವಿಚಾರ ತಿಳಿದು ಕಾರ್ಮಿಕರು ಭಯಭೀತರಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಮರಿಯಾನೆಗಳು ಸೇರಿದಂತೆ ೨೮ಕ್ಕೂ ಅಧಿಕ ಕಾಡಾನೆಗಳು ಮಾಲ್ದಾರೆ ರಸ್ತೆಯ ಮೂಲಕ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿರುವ ದೃಶ್ಯ ಕಂಡುಬAದಿತು. ದೇವಾ ಲಯ ಸಮೀಪ ಇರುವ ಕೊಠಡಿಗೆ ಕಾಡಾನೆಗಳು ದಾಳಿ ನಡೆಸಿ ಹಾನಿಗೊಳಿ ಸಿರುವ ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. -ವಾಸು