ಕಡAಗ, ಸೆ. ೯: ಕಡಂಗ ಫುಟ್ಬಾಲರ್ಸ್ ಆಶ್ರಯದಲ್ಲಿ ನಡೆದ ಅಂಡರ್ ೧೭ ಕಾಲ್ಚೆಂಡು ಕ್ರೀಡಾಕೂಟವನ್ನು ಕಡಂಗ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಯಿತು
ಯುವ ಪ್ರತಿಭೆಗಳನ್ನು ಒಳಗೊಂಡ ಹಲವು ತಂಡಗಳು ಪಾಲ್ಗೊಂಡಿದ್ದವು.
ಫೈನಲ್ ಪಂದ್ಯದಲ್ಲಿ ಸ್ಟೆöÊನೆರಸ್ ಬೇತ್ರಿ ತಂಡವನ್ನು ಪೆನಾಲ್ಟಿ ಶೂಟ್ನಲ್ಲಿ ೪ -೦ ಅಂತರದಲ್ಲಿ ಆರ್ ಬಿ ಕೆ ಕಡಂಗ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಕ್ರೀಡಾಕೂಟದ ಉತ್ತಮ ಆಟಗಾರನಾಗಿ ಉನೈಸ್ ಕಡಂಗ ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಅಶೀಕ್ ಬೇತ್ರಿ, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ರಾಜಿನ್ ಕಡಂಗ ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ಅಬೂಬಕ್ಕರ್, ಕಬೀರ್, ಸಿದ್ದೀಕ್ ಮತ್ತು ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.