ಮಡಿಕೇರಿ, ಸೆ. ೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ‘ಆಟ್-ಪಾಟ್ ಪಡಿಪು’ ಕಾರ್ಯಾಗಾರವನ್ನು ಸಂಘ-ಸAಸ್ಥೆ, ಸಮಾಜಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಐನ್‌ಮನೆ, ಅಂಬಲ, ದೇವನೆಲೆಗಳಲ್ಲಿ ಹಾಗೂ ಸೂಕ್ತ-ಯೋಗ್ಯ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗುವುದು. ೧೫ ದಿವಸ ಇಲ್ಲವೇ ಒಂದು ತಿಂಗಳ ಕಾಲ ನಡೆಸುವ ಈ ಪಡಿಪು ಶಿಬಿರದಲ್ಲಿ ಬಾಳೋಪಾಟ್, ಉಮ್ಮತ್ತಾಟ್, ಬೊಳಕಾಟ್, ಧೋಳ್ ಪಾಟ್, ಉರ್‌ಟಿಕೊಟ್ಟ್ ಆಟ್, ವಾಲಗತ್ತಾಟ್ ಹಾಗೂ ಕೊಂಬ್ ಕೊಟ್ಟ್ ತರಬೇತಿ ಸೇರಿದಂತೆ ಹಲವು ಬಗೆಯ ಕೊಡವ ಆಟ್-ಪಾಟ್‌ಗಳ ಕಲಿಕೆಯ ತರಬೇತಿಯನ್ನು ನೀಡಲಾಗುವುದು.

ಈ ಸಂಬAಧ ಆಟ್-ಪಾಟ್, ಕೊಂಬುಕೊಟ್ಟ್ ಪಾಂಡಿತ್ಯ ಇರುವ ಹಾಗೂ ಕಲಿಸಲು ಆಸಕ್ತಿ ಇರುವ ಕಲಾವಿದರು ಸ್ವವಿವರಗಳನ್ನು ಅಕಾಡೆಮಿಗೆ ನೀಡುವಂತೆ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರು ತಿಳಿಸಿದ್ದಾರೆ. ಆಯ್ಕೆಯಾಗುವ ತರಬೇತುದಾರರಿಗೆ ಅಕಾಡೆಮಿಯ ವತಿಯಿಂದ ಗೌರವ ಸಂಭಾವನೆಯನ್ನು ನೀಡಲಾಗುವುದು.