ಮಡಿಕೇರಿ, ಸೆ. ೯: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಲೇಖಕರು ಅರೆಭಾಷೆ ಕಥೆ, ಅರೆಭಾಷೆ ಅಜ್ಜಿ ಕಥೆ, ಅರೆಭಾಷೆ ಜನಪದ, ಅರೆಭಾಷೆ ಕವನ, ಅರೆಭಾಷೆ ಲೇಖನ, ಅರೆಭಾಷೆ ವಿಚಾರ ಸಾಹಿತ್ಯ, ಅರೆಭಾಷೆ ಲಲಿತ ಪ್ರಬಂಧ, ಅರೆಭಾಷೆ ಸಂಶೋಧನ ಕೃತಿಗಳು ಇನ್ನಿತರೆ ಬರಹಗಳಿದ್ದಲ್ಲಿ ಹಸ್ತಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಕೋರಿದ್ದಾರೆ. ಆದ್ದರಿಂದ ತಮ್ಮ ಹಸ್ತಪ್ರತಿಗಳನ್ನು ಸಲ್ಲಿಸಲು ಇದೇ ಸೆಪ್ಟೆಂಬರ್ ೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ.ನಂ. ೬೩೬೨೫೨೨೬೭೭ ಸಂಪರ್ಕಿಸಬಹುದು. ಚಿಡಿebಚಿseಚಿಛಿಚಿಜemಥಿ@gmಚಿiಟ.ಛಿom ಸೂಚನೆ: ಪುಸ್ತಕಗಳ ಆಯ್ಕೆಯ ಹಕ್ಕು ಅಕಾಡೆಮಿಯದಾಗಿದೆ ಹಾಗೂ ಬರಹ ಕನಿಷ್ಟ ೭೦ ರಿಂದ ೮೦ ಪುಟಗಳಿರಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ.