ಮಡಿಕೇರಿ, ಸೆ. ೮: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸುಹಾಸ್ ಕೆ. ಅವರು ಆಯ್ಕೆಯಾಗಿದ್ದಾರೆ. ಮೂಲತಃ ಮಡಿಕೇರಿಯವರಾದ ಇದೀಗ ಮಂಗಳೂರಿನಲ್ಲಿ ನೆಲೆಸಿರುವ ಮಲ್ಲಿಕಾ ಹಾಗೂ ದಿವಂಗತ ದಿನೇಶ್ ದಂಪತಿಯ ಪುತ್ರರಾಗಿರುವ ಸುಹಾಸ್, ಮಡಿಕೇರಿ ಸಂತ ಮೈಕಲರ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದು, ಮೈಸೂರಿನ ಜೆ.ಸಿ.ಇ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದಿದ್ದಾರೆ. ಚೆನ್ನೆöÊನ ಆಫಿಸರ್ಸ್ ಟ್ರೆöÊನಿಂಗ್ ಅಕಾಡೆಮಿಯಲ್ಲಿ ಸೇನಾ ತರಬೇತಿ ಪಡೆದು ಭಾರತೀಯ ಸೇನೆಯ ಆರ್ಟಿಲರಿ ವಿಭಾಗದಲ್ಲಿ ಲೆಫ್ಟಿನೆಂಟ್ ಆಗಿ ಕಮಿಷನ್ಡ್ ಆಗಿದ್ದಾರೆ.