ಮಡಿಕೇರಿ, ಸೆ. ೮ : ಭಾರತ-ಪಾಕ್ ನಡುವಿನ ೧೯೬೫ರ ಯುದ್ಧದಲ್ಲಿ ಶತ್ರುರಾಷ್ಟçದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಹುತಾತ್ಮರಾದ ಕೊಡಗಿನ ಸ್ಕಾ÷್ವಡ್ರÀನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ೫೯ನೇ ಪುಣ್ಯಸ್ಮರಣಾ ಕಾರ್ಯಕ್ರಮ ನಗರದ ಖಾಸಗಿ ಬಸ್ ನಿಲ್ದಾಣದ ವೀರಯೋಧನ ವೃತ್ತದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಹೃದಯಸ್ಪರ್ಶಿ ಯಾಗಿ ನಡೆಯಿತು.

ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಹಳೆಯ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಆಯೋಜಿತ ಕಾರ್ಯಕ್ರಮ ದಲ್ಲಿ ವೀರ ಯೋಧನ ಭಾವ ಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು ಸೇರಿದಂತೆ, ಮಾಜಿ ಯೋಧರು, ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

‘ರಾಷ್ಟಿçÃಯ ಪುಣ್ಯದಿನ’ವನ್ನಾಗಿ ಘೋಷಿಸಿ: ಸ್ವಾ.ಲೀ.ಅಜ್ಜಮಾಡ ದೆೆÃವಯ್ಯ ಟ್ರಸ್ಟ್ನ ಅಧ್ಯಕ್ಷರಾದ ಅಜ್ಜಮಾಡ ಕಟ್ಟಿ ಮಂದಯ್ಯ ವೀರ ಯೋಧನಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ, ಭಾರತ-ಪಾಕ್ ಯುದ್ಧದ ಸಂದರ್ಭ ಶತ್ರು ರಾಷ್ಟçದ ವಿಮಾನವನ್ನು ಹೊಡೆದುರುಳಿಸುವ ಮೂಲಕ ಕೆಚ್ಚೆದೆಯ ಸಾಹಸ ಮೆರೆದು ಸ್ಕಾ÷್ವ. ಲೀ.ದೇವಯ್ಯ ಹುತಾತ್ಮರಾಗಿದ್ದಾರೆ. ಅವರ ಬಲಿದಾನದ ಈ ದಿನವನ್ನು ‘ರಾಷ್ಟಿçÃಯ ಪುಣ್ಯದಿನ’ವನ್ನಾಗಿ ಘೋಷಿಸುವ ಮೂಲಕ ಸರ್ಕಾರವೆ ಪುಣ್ಯದಿನವನ್ನು ಆಚರಿಸಬೆÉÃಕೆಂದು ಮನವಿ ಮಾಡಿದರು.

ಕೊಡಗು ಫೀ.ಮಾ.ಕೆ.ಎಂ. ಕಾರ್ಯಪ್ಪ, ಜ.ತಿಮ್ಮಯ್ಯ ಅವರಂತಹ ಮಹಾನ್ ವೀರ ಸೇನಾನಿಗಳನ್ನು, ಕೆಚ್ಚೆದೆಯ ಯೋಧರನ್ನು ಈ ನಾಡಿಗೆ ನೀಡಿದ ಪುಣ್ಯಭೂಮಿ. ಈ ನೆಲದ ಸುಪುತ್ರರಾಗಿ ದೇಶ ರಕ್ಷಣೆಗಾಗಿ ಬಲಿದಾನಗೈದ ಸ್ಕಾ÷್ವ.ಲೀ.ದೇವಯ್ಯ ಅವರ ಭಾವಚಿತ್ರವನ್ನು ಎಲ್ಲಾ ಕೊಡವ ಸಮಾಜಗಳಲ್ಲಿ ಅಳವಡಿಸಬೇಕೆಂದು ಕೋರಿದ ಅವರು, ಸ್ಕಾ÷್ವ.ಲೀ. ದೇವಯ್ಯ ಅವರು ಅಜ್ಜಮಾಡ ಕುಟುಂಬದಲ್ಲಿ ಜನಿಸಿರಬಹುದು. ಆದರೆ, ಅವರು ಇಡೀ ರಾಷ್ಟçಕ್ಕೆ ಸೇರಿದ ವ್ಯಕ್ತಿಯಾಗಿದ್ದಾರೆ ಎಂದರು.

ವಿಧಾನಸಭೆಯ ಮಾಜಿ ಅಧ್ಯಕ್ಷರು, ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಮಾತನಾಡಿ, ಭಾರತ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸ್ಕಾ÷್ವ.ಲೀ. ದೇವಯ್ಯ ಅವರು, ರಾಷ್ಟç ರಕ್ಷಣೆಗಾಗಿ ನಡೆಸಿದ ಹೋರಾಟದ ಮೂಲಕ ಎಲ್ಲ ವಿಚಾರಗಳಿಗೂ ಮಿಗಿಲಾಗಿ ‘ದೇಶ ಮೊದಲು’ ಎನ್ನುವುದನ್ನು ತೋರಿಸಿಕೊಟ್ಟು ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷÀ ಮಂಡುವAಡ ಮುತ್ತಪ್ಪ ಮಾತನಾಡಿ, ರಾಷ್ಟçದ ಹೆಮ್ಮೆಯ ಪುತ್ರ ಸ್ಕಾ÷್ವ.ಲೀ.ದೇವಯ್ಯ ಅವರ ಭಾವಚಿತ್ರವನ್ನು ಮಡಿಕೇರಿ ಕೊಡವ ಸಮಾಜದಲ್ಲಿ ಅಳವಡಿಸಲಾಗುತ್ತದೆ ಎಂದರು.

ಮಡಿಕೇರಿ ನಗರಸಭಾ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಯೋಧರ ನಾಡೆಂದು ಕರೆಯಲ್ಪಡುವ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಕಾ÷್ವ. ಲೀ.ದೇವಯ್ಯ ಅವರ ಆದರ್ಶಗಳನ್ನು ಯುವ ಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಲು ಮುಂದೆ ಬರುವಂತೆ ಕರೆ ನೀಡಿದರು. ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯು ಅವರು, ದೇಶ ಕಾಯುವ ಯೋಧರು ರಾಷ್ಟçದ ಬೆನ್ನೆಲುಬು ಮಾತ್ರವಲ್ಲ ಅವರೊಂದು ದೊಡ್ಡ ಶಕ್ತಿಯೇ ಆಗಿದ್ದಾರೆ ಎಂದು ನುಡಿದರು.

ಮಾಜಿ ಯೋಧ ಬಾಳೆಯಡ ಶಂಭು ಮಾತನಾಡಿ, ೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ದೇವಯ್ಯ ಅವರು ಬದುಕಿ ಹಿಂದಕ್ಕೆ ಬರುವ ಅವಕಾಶಗಳಿತ್ತು. ಆದರೆ, ಈ ಅವಕಾಶವನ್ನು ಕೈಬಿಟ್ಟು ಶತ್ರು ರಾಷ್ಟç ಪಾಕ್‌ನ ಅತ್ಯಾಧುನಿಕ ಯುದ್ಧವಿಮಾನವನ್ನು ಕೆಚ್ಚೆದೆಯ ಸಾಹಸದ ಮೂಲಕ ಹೊಡೆದುರುಳಿಸಿ ಹುತಾತ್ಮರಾಗಿದ್ದಾರೆ. ಅವರ ಈ ಮಹಾನ್ ಬಲಿದಾನ ಹಲವಾರು ವರ್ಷಗಳ ಬಳಿಕ ಪಾಕ್ ಸೇನೆಯ ಅಧಿಕಾರಿಯೊಬ್ಬರನ್ನು ಬಿಬಿಸಿಯವರು ಸಂದರ್ಶನ ಮಾಡಿದ ಸಂದರ್ಭ ಬೆಳಕಿಗೆ ಬಂತು. ಇಂತಹ ಮಹಾನ್ ಯೋಧನ ಭಾವ ಚಿತ್ರವನ್ನು ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲು ಅಳವಡಿಸುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು.

ಸ್ಕಾ÷್ವ.ಲೀ. ದೇವಯ್ಯ ಅವರ ಅಂತ್ಯ ಸಂಸ್ಕಾರ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಪರಿಶೀಲನೆ ನಡೆಸಿ, ಅವರ ಅಸ್ಥಿ ದೊರಕಿದಲ್ಲಿ, ವೀರಯೋಧನ ಹೆಸರಿನ ಸ್ಮಾರಕವನ್ನು ನಿರ್ಮಿಸ ಬೇಕೆಂದು ಮನವಿ ಮಾಡಿದರು. ಮಾಜಿ ಯೋಧ ಮುಂಜಾAದಿರ ಅಪ್ಪಯ್ಯ ರಾಜಾ ಅವರು, ಮಡಿಕೇರಿಯ ಕೆÉÃಂದ್ರ ಸ್ಥಾನದಲ್ಲಿ ಸ್ಲಾ÷್ವ.ಲೀ. ದೇವಯ್ಯ ವೃತ್ತ ನಿರ್ಮಾಣ, ಪ್ರತಿಮೆ ನಿರ್ಮಾಣದ ಬಗೆಗಿನ ಪರಿಶ್ರಮವನ್ನು ಸ್ಮರಿಸಿದರು. ಕೊಡವ ಮಕ್ಕಡ ಕೂಟದ ಬೊಳ್ಳಜಿರ ಅಯ್ಯಪ್ಪ ಅವರು ಕಾರ್ಯಕ್ರಮದ ಬಳಿಕ ಸ್ಕಾ÷್ವ.ಲೀ.ದೇವಯ್ಯ ಅವರ ಭಾವಚಿತ್ರವನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಅವರಿಗೆ ಕೊಡುಗೆಯಾಗಿ ನೀಡಿದರು.

ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಸ್ಕಾ÷್ವ.ಲೀ. ದೇವಯ್ಯ ಅವರ ವೃತ್ತಕ್ಕೆ ಆಗಮಿಸಿ ವೀರ ಯೋಧನಿಗೆ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಮಾಜಿ ಯೋಧರಾದ ಮಲಚ್ಚೀರ ಅಚ್ಚಯ್ಯ, ಬೊಟ್ಟಂಗಡ ಜಪ್ಪು, ಬಾಳೆಯಡ ಮಂದಪ್ಪ, ಅಜ್ಜಮಾಡ ಕುಟುಂಬಸ್ಥರಾದ ಅಜ್ಜಮಾಡÀ ಬೆಳ್ಯಪ್ಪ, ಅಜ್ಜಮಾಡ ಕಾರ್ಯಪ್ಪ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಅಯ್ಯಣ್ಣ, ಪುಟ್ಟಿಚಂಡ ಡಾನ್ ದೇವಯ್ಯ, ಕೂಟದ ಪದಾಧಿಕಾರಿ ಪುತ್ತೇರಿರ ಕಾಳಯ್ಯ ಮೊದÀಲಾದವರು ಪಾಲ್ಗೊಂಡು ವೀರ ಯೋಧನಿಗೆ ಗೌರವ ಸಲ್ಲಿಸಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಸ್ವಾಗತಿಸಿ, ವಂದಿಸಿದರು.

ಪುಷ್ಪನಮನ

ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ವತಿಯಿಂದ ಪೊನ್ನಂಪೇಟೆಯ ಕಾನೂರು-ಹುದಿಕೇರಿ ವೃತ್ತದಲ್ಲಿ ಇರುವ ಅಜ್ಜಮಾಡ ಬಿ. ದೇವಯ್ಯ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.

ಈ ಸಂದರ್ಭ ವೆಟರನ್ ಏರ್‌ಮನ್ ಸಿಪಿಎಲ್ ಚೆಟ್ರುಮಾಡ ಕಾಶಿ ತಮ್ಮಯ್ಯ ಮತ್ತು ಸಾರ್ಜೆಂಟ್ ಚೋಡುಮಾಡ ರಾಜಾ ಮಾದಪ್ಪ, ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ.ಮಂದಣ್ಣ, ಕಾರ್ಯದರ್ಶಿ ಪೆಮ್ಮಂಡ ಶ್ಯಾಮ್ ಪ್ರಸಾದ್,ಖಜಾಂಚಿ ಐನಂಡ ಕೆ. ತಮ್ಮಯ್ಯ, ಉಪಾಧ್ಯಕ್ಷ ಚೆಕ್ಕೆರ ಕೆ. ರಮೇಶ್, ಜಂಟಿ ಕಾರ್ಯದರ್ಶಿಗಳಾದ ಬಾಚಮಾಡ ಎಂ. ಬೆಳ್ಯಪ್ಪ, ಅಜ್ಜಿಕುಟ್ಟಿರ ಕೆ. ಮುತ್ತಪ್ಪ, ನಿರ್ದೇಶಕರಾದ ಚೋಡುಮಾಡ ರಾಜಾ ಮಾದಪ್ಪ, ಮಲ್ಲಮಾಡ ನರೇಂದ್ರ, ಅಜ್ಜಿಕುಟ್ಟಿರ ಸಿ. ಸೋಮಯ್ಯ, ಮಾಚಂಗಡ ಎಸ್. ಮುತ್ತಣ್ಣ, ಅಣ್ಣೀರ ಸಾಬು ಮಾದಯ್ಯ, ಬಯವಂಡ ಜನಕ, ಬಿ. ಎಸ್. ರಾಜ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.