ಕೂಡಿಗೆ, ಆ. ೨೬: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಗಳಲ್ಲಿ ನೀರನ್ನು ಹರಿಸಿದ ಹಿನ್ನೆಲೆಯಲ್ಲಿ ಭತ್ತದ ನಾಟಿಯ ಕಾರ್ಯ ಈ ಸಾಲಿನಲ್ಲಿ ಶೇ. ೯೦ ರಷ್ಟು ಪೂರ್ಣಗೊಂಡಿದ್ದು, ಅದಕ್ಕೆ ಸಂಬAಧಿಸಿದ ಕಳೆ ತಗೆಯುವಿಕೆ ಮೇಲ್ ಗೊಬ್ಬರ ಹಾಕುವುದು ಸೇರಿದಂತೆ ಇತರೆ ಕೆಲಸವನ್ನು ಈ ವ್ಯಾಪ್ತಿಯ ರೈತರು ಆರಂಭಿಸಿದ್ದಾರೆ.
ಈ ಸಾಲಿನಲ್ಲಿ ಹುದುಗೂರು, ಶಿರಂಗಾಲ, ಕೂಡಿಗೆ, ಮದಲಾಪುರ, ಹೆಬ್ಬಾಲೆ, ತೊರೆನೂರು ಸೇರಿದಂತೆ ಅನೇಕ ಉಪ ಗ್ರಾಮಗಳಲ್ಲಿ ರೈತರು ಈ ಬಾರಿ ಹಾರಂಗಿ ಅಣೆಕಟ್ಟೆಯ ನಾಲೆಯ ನೀರನ್ನು ಬಳಕೆ ಮಾಡಿಕೊಂಡು ಟ್ರಾö್ಯಕ್ಟರ್ ಮೂಲಕ ಉಳುಮೆ ಮಾಡಿ ಹೈಬ್ರೀಡ್ ತಳಿಯ ಭತ್ತದ ಬೆಳೆಯ ಸಸಿ ಮಡಿಗಳಿಂದ ಸಸಿಗಳನ್ನು ತೆಗೆದು ನಾಟಿ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ರೈತರು ತೊಡಗಿದ್ದಾರೆ.
ಈ ಸಾಲಿನಲ್ಲಿ ಈ ಭಾಗದ ರೈತರು ಕೃಷಿ ಇಲಾಖೆಯ ನಿಯಮಾನುಸಾರ ತಮ್ಮ ಜಮೀನಿನ ಮಣ್ಣನ್ನು ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿಕೊಂಡು ಅವರ ಸೂಚನೆಯಂತೆ ಸಾವಯವ ಮತ್ತು ರಸಾಯನಿಕ ಗೊಬ್ಬರಗಳ ಬಳಕೆ, ರಂಜಕ, ಸುಣ್ಣ ಬಳಕೆ ಮಾಡಿಕೊಂಡು ಉಳುಮೆ ಮಾಡಿ ನಂತರ ಉತ್ತಮ ಇಳುವರಿ ಬರುವ ಮತ್ತು ವಾತಾವರಣಕ್ಕೆ ಅನುಗುಣವಾಗಿ ಹೈಬ್ರೀಡ್ ತಳಿ ಭತ್ತ ನಾಟಿಯನ್ನು ಮಾಡಲಾಗಿದೆ.
ಈ ಬಾರಿ ಜುಲೈ ತಿಂಗಳಲ್ಲಿ ಭಾರಿ ಮಳೆ ಬಂದಿದೆ. ಆಗಸ್ಟ್ ತಿಂಗಳಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಹಾರಂಗಿ ನಾಲೆಯ ನೀರನ್ನು ಬಳಕೆ ಮಾಡಿಕೊಂಡು ಬೇಸಾಯ ಮಾಡಲು ಅನುಕೂಲವಾಗಿದೆ ಎಂದು ಹಾರಂಗಿ ಅಚ್ಚುಕಟ್ಟು ಪ್ರದೇಶ ನೀರು ಬಳಕೆದಾರ ಸಂಘದ ನಿರ್ದೇಶಕ ಹೆಚ್.ಟಿ. ದಿನೇಶ್ ಸೇರಿದಂತೆ ರೈತರು ತಿಳಿಸಿದ್ದಾರೆ.