ಶ್ರೀಮಂಗಲ, ಆ. ೨೬: ಕೊಡಗು -ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮೈಸೂರು ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರನ್ನು ಮೈಸೂರಿನಲ್ಲಿ ಕೊಡಗು ಸಂರಕ್ಷಣಾ ವೇದಿಕೆಯ ನಿಯೋಗವು ಭೇಟಿಯಾಗಿ ಸಮಾಲೋಚನೆ ನಡೆಸಿತು.
ಮುಖ್ಯವಾಗಿ ಅಂತರರಾಷ್ಟಿçÃಯ ಮಾರುಕಟ್ಟೆ ಅನುಗುಣವಾಗಿ ಸ್ಥಳೀಯವಾಗಿ ರೋಬಸ್ಟಾ ಕಾಫಿಗೆ ಮಾರುಕಟ್ಟೆ ದರ ವಂಚಿತವಾಗಿರುವ ಬೆಳೆಗಾರರ ಸಮಸ್ಯೆ ಬಗ್ಗೆ ಸಂಸದರಿಗೆ ಮನವರಿಕೆ ಮಾಡಲಾಯಿತು. ಇದರ ಬಗ್ಗೆ ಕೂಲಂಕಷÀವಾಗಿ ಚರ್ಚೆ ನಡೆದು ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವರ ಗಮನಕ್ಕೆ ತಂದು, ಸಚಿವರು ಹಾಗೂ ಕೊಡಗು ಸಂರಕ್ಷಣಾ ವೇದಿಕೆಯ ನಿಯೋಗದೊಂದಿಗೆ ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಯಿತು.
ಭಾರತೀಯ ಕಾಫಿ ಮಂಡಳಿ ಯೊಂದಿಗೆ ಈ ಬಗ್ಗೆ ಮತ್ತು ಬೆಳೆಗಾರರು ಎದುರಿಸುತ್ತಿರುವ ಇತರ ಸಮಸ್ಯೆಗಳ ಬಗ್ಗೆ ಪರಿಹಾರಕ್ಕಾಗಿ ನೇರ ಮಾತುಕತೆಗೆ ವೇದಿಕೆ ಕಲ್ಪಿಸುವುದಾಗಿ; ಈ ಬಗ್ಗೆ ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಕಾಫಿ ಸಮ್ಮೇಳನದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಿಸಿ ಈ ವಿಚಾರದ ಬಗ್ಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭರವಸೆ ನೀಡಿದರು. ಕಾಫಿ ಉದ್ಯಮದ ಮತ್ತೊಂದು ಸಂಕಷ್ಟವಾಗಿರುವ ಕಾಡಾನೆ- ಮಾನವ ಸಂಘರ್ಷವನ್ನು ನಿಯಂತ್ರಿಸಲು ಸಂಸದರ ಗಮನ ಸೆಳೆದಾಗ ಈಗಾಗಲೇ ಈ ಬಗ್ಗೆ ಸರ್ಕಾರ ದೊಂದಿಗೆ ಸಮಾಲೋಚನೆ ನಡೆಸಿದ್ದು, ಅರಣ್ಯ ಅಂಚಿನಲ್ಲಿ ರೈಲ್ವೇ ಬ್ಯಾರಿಕೇಡ್ ಯೋಜನೆ ಮೂಲಕ ಸುಮಾರು ೨೮೦ ಕಿ ಮೀ ಕೈಗೆತ್ತಿಕೊಂಡಿದ್ದು, ಅದನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಳೆಹಾನಿಯಿಂದ ಕಾಫಿ ಬೆಳೆ ನಷ್ಟವಾಗಿರುವ ಬಗ್ಗೆ ಗಮನಕ್ಕೆ ತಂದಾಗ ಈ ಬಾರಿ ಕಾಫಿ ಬೆಳೆಗೆ ದೊಡ್ಡ ನಷ್ಟವಾಗಿರುವ ಬಗ್ಗೆ ತಿಳಿದುಬಂದಿದ್ದು ಈಗಾಗಲೇ ಕಾಫಿ ಬೆಳೆ ನಷ್ಟ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಪೆಟ್ರೋಲಿಯಂ ನಂತರ ಅತಿ ದೊಡ್ಡ ವಿದೇಶಿ ವಿನಿಮಯಗೊಳಿಸುವ ಕಾಫಿ ಬೆಳೆಗೆ ವಿಮೆ ಸೌಲಭ್ಯ ಇಲ್ಲದ ಬಗ್ಗೆ ಸರ್ಕಾರ ಪ್ರೀಮಿಯಂ ಪಾವತಿಸುವ ರೀತಿಯಲ್ಲಿ ಕಾಫಿ ಬೆಳೆ ನಷ್ಟಕ್ಕೆ ಬೆಳೆ ವಿಮೆಯನ್ನು ಜಾರಿಗೆ ತರುವಂತೆ ಸಂಸದರ ಗಮನಕ್ಕೆ ತರಲಾಯಿತು. ಈ ಸಂದರ್ಭ ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ವೇದಿಕೆಯ ಪ್ರಮುಖರಾದ ಜಮ್ಮಡ ಗಣೇಶ್ ಅಯ್ಯಣ್ಣ, ಮಚ್ಚಾಮಾಡ ಅನೀಶ್ ಮಾದಪ್ಪ, ಪಂದ್ಯAಡ ಗಿರೀಶ್, ಮಲ್ಲಮಾಡ ಪ್ರಭು ಪೂಣಚ್ಚ, ಅಣ್ಣೀರ ಹರೀಶ್ ಮಾದಪ್ಪ, ಉಳುವಂಗಡ ಲೋಹಿತ್ ಭೀಮಯ್ಯ, ಕೇಚಮಾಡ ವಿಶ್ವಾಸ್ ಹಾಜರಿದ್ದರು.