ಮಡಿಕೇರಿ, ಆ. ೨೬: ಮರಗೋಡು ವಿವೇಕಾನಂದ ಯುವಕ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್.ಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ಬಿ.ಆರ್.ದುಶ್ಯಂತ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಪಿ.ಪಿ. ಚೇತನ್, ಉಪಾಧ್ಯಕ್ಷರಾಗಿ ಬಿ.ಕೆ. ಚಂದ್ರಶೇಖರ್, ಸಹಕಾರ್ಯದರ್ಶಿ ಕೆ.ಡಿ. ಪವನ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಕೆ.ಸಿ. ಅನಂತ್, ಸಮಿತಿ ಸದಸ್ಯರುಗಳಾಗಿ ಕೆ.ಎಸ್. ಪ್ರಶಾಂತ್, ಪಿ.ಟಿ. ಜಗದೀಶ್, ಕೆ.ಎ. ರಾಜೇಶ್, ಕೆ.ಎಸ್. ಜೀವನ್, ಡಬ್ಲುö್ಯ.ಎಸ್. ಅಕ್ಷಿತ್, ಕೆ.ಎ. ಪುನಿತ್ ಹಾಗೂ ಐ.ಯು. ನವನೀತ್ ನೇಮಕಗೊಂಡರು. ಸಂಘದ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷÀ ಬಿ.ಆರ್.ಲಕ್ಷಿö್ಮÃಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨೦೨೩-೨೪ನೇ ಸಾಲಿನ ಜಮಾ ಖರ್ಚನ್ನು ಖಜಾಂಚಿ ಎಂ.ಕೆ.ಬೆಳ್ಯಪ್ಪ ಮಂಡಿಸಿದರು. ಸಂಘದ ಆಡಳಿತ ಮಂಡಳಿಯ ವರದಿಯನ್ನು ಕಾರ್ಯದರ್ಶಿ ಕೆ.ಎ.ಹನೀಶ್ ವಾಚಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಬಿ.ಆರ್.ಲಕ್ಷಿö್ಮÃಪತಿ, ಸಂಘದ ಏಳಿಗೆಗಾಗಿ ಕೈ ಜೋಡಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ನಮ್ಮ ಅವಧಿಯಲ್ಲಿ ಸಹಕಾರ ನೀಡಿದಂತೆ ಮುಂದೆಯೂ ಹೊಸ ಆಡಳಿತ ಮಂಡಳಿಗೆ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯದರ್ಶಿ ಕೆ.ಎ.ಹನೀಶ್ ಮಾತನಾಡಿ, ಸಂಘವು ೫೪ ವರ್ಷಗಳನ್ನು ಪೂರೈಸಿದ್ದು, ಶ್ರಮಿಸಿದ ಎಲ್ಲಾ ಹಿರಿಯ ಸದಸ್ಯರನ್ನು ನೆನಪಿಸಿಕೊಳ್ಳುತ್ತಾ ಹೊಸ ಆಡಳಿತ ಮಂಡಳಿಯನ್ನು ಅಭಿನಂದಿಸುವುದಾಗಿ ತಿಳಿಸಿದರು. ನೂತನ ಅಧ್ಯಕ್ಷ ಕೆ.ಎನ್. ಪ್ರಸಾದ್ ಮಾತನಾಡಿ, ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಘದ ಸರ್ವ ಸ ಪ್ರಾರ್ಥಿಸಿ, ಉಪಾಧ್ಯಕ್ಷ ಐ.ಪಿ. ನಾಗೇಶ್ ಸ್ವಾಗತಿಸಿ, ಬಿ.ಆರ್. ದುಶ್ಯಂತ್ ವಂದಿಸಿದರು. ಅಗಲಿದ ಸಂಘದ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತುದಸ್ಯರು ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸದಸ್ಯ ಕೆ.ಡಿ. ಪವನ್ ಕುಮಾರ್.