ಮಡಿಕೇರಿ, ಆ. ೨೭: ಕೊಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಮಹಿಳೆಯರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಹಿಳೋದಯ ಮಹಿಳಾ ಒಕ್ಕೂಟ ದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಯಲ್ಲಿ ಓ.ಡಿ.ಪಿ. ಸಂಸ್ಥೆಯ ಸಂಯೋಜಕಿ ಮೋಲಿ, ಕೌಶಲ್ಯಾಭಿವೃದ್ಧಿ ಸಂಯೋಜಕಿ ಲಲಿತಾ, ವಲಯ ಸಂಯೋಜಕಿ ಜಾಯ್ಸ್ ಮೆನೆಜಸ್, ಮುಖಂಡರಾದ ಎನ್. ವಿಜಯಾ, ಮಮತಾ, ಸಿ.ಎಸ್. ಅಕ್ಷಯ್, ಒಕ್ಕೂಟದ ಅಧ್ಯಕ್ಷೆ ತಾರಾ, ಮಹಾ ಒಕ್ಕೂಟದ ಸದಸ್ಯರಾದ ಲೂಸಿ ಜೇಮ್ಸ್, ರಾಣಿ, ಮೇರಿ, ಜಯಂತಿ, ತಾಲೂಕು ಹಾಗೂ ಜಿಲ್ಲಾ ಒಕ್ಕೂಟದ ಸದಸ್ಯರು ಹಾಗೂ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.