ಸುಂಟಿಕೊಪ್ಪ, ಆ. ೨೭: ಐಗೂರು ಗ್ರಾಮ ಪಂಚಾಯಿತಿ ವತಿಯಿಂದ ೭೮ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಳೆದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾದಾಗ ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ನೀರು ಒದಗಿಸಲು ಸಹಕರಿಸಿದ ಕೋವರ್‌ಕೊಲ್ಲಿ ಟಾಟಾ ಎಸ್ಟೇಟಿನ ವ್ಯವಸ್ಥಾಪಕರಾದ ಬಿ.ಡಿ. ಅಪ್ಪಯ್ಯ, ಜಾಯ್ ಅಜಿತ್, ಕುಂಬೂರು ತೋಟದ ವ್ಯವಸ್ಥಾಪಕರಾದ ಪೊನ್ನಣ್ಣ ಹಾಗೂ ಯಡವಾರೆ ಗ್ರಾಮದ ಪಳಂಗೋಟು ಸೀತಮ್ಮ ಅವರುಗಳ ಸೇವೆ ಪರಿಗಣಿಸಿ ಐಗೂರು ಗ್ರಾ.ಪಂ. ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಐಗೂರು ಗ್ರಾ.ಪಂ. ಅಧ್ಯಕ್ಷ ಜಿ.ಕೆ. ವಿನೋದ್, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರುಗಳಾದ ಜೋಯಪ್ಪ, ಜಾನಕಿ ಮೇದಪ್ಪ, ಬೇಬಿ, ಬಾರನ ಪ್ರಮೋದ್, ಲಿಂಗೇರಿ ರಾಜೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ, ಜೈನುದ್ದೀನ್, ಪೂರ್ಣಿಮಾ, ಪಾರ್ವತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.