ಕರಿಕೆ, ಆ. ೨೬: ಶಾಲೆಗಳಲ್ಲಿ ವಿದ್ಯರ‍್ಥಿ ದಿನಗಳಲ್ಲಿಯೇ ಪರಿಸರದ ಮಹತ್ವ ಮತ್ತು ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಶಿಕ್ಷಕರ ಪಾತ್ರ ಪ್ರಮುಖ ಎಂದು ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಹೇಳಿದರು.

ಗ್ರಾಮದ ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆ ಕರಿಕೆಯಲ್ಲಿ ನಡೆದ ತಾಯಿಯ ಹೆಸರಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೇ ನಾಮ್) ಅಭಿಯಾನವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವ್ಯಕ್ತಿಗೂ ಇಬ್ಬರು ತಾಯಂದಿರು ಇರುತ್ತಾರೆ. ಒಬ್ಬರು ಜನ್ಮ ನೀಡಿದ ತಾಯಿ ಮತ್ತೊಬ್ಬರು ಪ್ರಕೃತಿ ಮಾತೆ. ಪ್ರಕೃತಿ ಹಾಗೂ ಹಸಿರು ಪರಿಸರ ಉಳಿದರೆ ನಾವೆಲ್ಲರೂ ಸುರಕ್ಷಿತವಾಗಿ ಇರಲು ಸಾಧ್ಯ. ನಮ್ಮ ಉಸಿರಾಟಕ್ಕೆ ಉತ್ತಮ ಹಸಿರು ವಾತಾವರಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಗಿಡ ನೆಟ್ಟು ಅದನ್ನು ರಕ್ಷಣೆ ಮಾಡುವ ಮೂಲಕ ಉತ್ತಮ ಪರಿಸರವನ್ನು ನರ‍್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.

ವಿಶ್ವ ಪರಿಸರ ದಿನದ ಅಂಗವಾಗಿ “ತಾಯಿಯ ಹೆಸರಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೇ ನಾಮ್)” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಿಡ ನೆಡುವ ಕರ‍್ಯಕ್ರಮವನ್ನು ಸರ‍್ವಜನಿಕರು ಮತ್ತು ಗ್ರಾ.ಪಂ. ಅಧಿಕಾರಿ, ಸಿಬ್ಬಂದಿಗಳು ಹಾಗೂ ಚುನಾಯಿತ ಸದಸ್ಯರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆಯ ಶಿಕ್ಷಕಿಯರು ಗಿಡ ನೆಡುವ ಮೂಲಕ ಕರ‍್ಯಕ್ರಮದಲ್ಲಿ ಭಾಗಿಯಾದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪಿ.ಪಿ. ಗಣಪತಿ, ಗ್ರಾ.ಪಂ. ಸಿಬ್ಬಂದಿಗಳು, ಇತರ ಸರ‍್ವಜನಿಕರು ಇದ್ದರು.