ಕೂಡಿಗೆ, ಆ. ೨೬: ಕೂಡಿಗೆ ಗಾ.ಪಂ.ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಕಕ್ಕೆಹೊಳೆ ನಾಲೆಯ ಕಾಲುವೆಗಳು ಮಳೆಯಿಂದಾಗಿ ಬೆಟ್ಟದ ನೀರು ಕಾಲುವೆಗಳ ಮೂಲಕ ಹರಿದ ಹಿನ್ನೆಲೆಯಲ್ಲಿ ಬೆಟ್ಟದ ಮಣ್ಣು ಸೇರಿ ಕಾಲುವೆಗಳು ಸಂಪೂರ್ಣವಾಗಿ ಹೂಳಿನಿಂದ ಮುಚ್ಚಲ್ಪಟ್ಟಿವೆ. ಅದರ ತೆರವಿಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಗ್ರಾಮಸ್ಥರು ಮತ್ತು ವ್ಯಾಪ್ತಿಯ ರೈತರಿಂದ ಸೋಮವಾರ ಮಡಿಕೇರಿ ಕೇಂದ್ರ ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಿದರು. ಸೀಗೆಹೊಸೂರು ಗ್ರಾಮದ ಗಣಪತಿ ದೇವಾಲಯ ಸಮೀಪದಿಂದ ಎರಡನೇ ಬ್ರಾಂಚ್ನ ಉಪ ಕಾಲುವೆಯವರೆಗೆ ಸಂಪೂರ್ಣ ವಾಗಿ ಹೂಳು ತುಂಬಿಕೊAಡಿರುವ ಹಿನ್ನೆಲೆಯಲ್ಲಿ ಕಕ್ಕೆಹೊಳೆ ಮುಖ್ಯ ನಾಲೆಯ ನೀರು ಸರಾಗವಾಗಿ ಹರಿಯಲು ಸಾದ್ಯವಾಗದೇ ರಸ್ತೆಯಲ್ಲಿಯೂ ಹರಿಯುತ್ತದೆ. ಅಲ್ಲದೇ ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಬೇಸಾಯಕ್ಕೆ ನೀರಿನ ಸಮಸ್ಯೆಯಿಂದಾಗಿ ಬೇಸಾಯಕ್ಕೆ ತೊಂದರೆ ಆಗುತ್ತಿದೆ ಎಂದು ಸೀಗೆಹೊಸೂರು, ಮಲ್ಲೇನಹಳ್ಳಿ ಗಂಗೆಕಲ್ಯಾಣ ವ್ಯಾಪ್ತಿಯ ರೈತರು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕುಮಾರ್ ಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸೀಗೆಹೊಸೂರು ವ್ಯಾಪ್ತಿಯ ರೈತರ ಮನವಿಗೆ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕುಮಾರ್ ಸ್ವಾಮಿ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣವೇ ಉಪ ಕಾಲುವೆಗಳ ಹೂಳನ್ನು ತೆರವುಗೊಳಿಸುವಲ್ಲಿ ಕಾರ್ಯೋನ್ಮುಖಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ರಾವ್, ಅನಂತ, ರೈತ ಮುಖ್ಯಸ್ಥರಾದ ಕೆ.ಸಿ. ಶಿವಣ್ಣ, ರೇಣುಕ, ಟಿ.ಸಿ. ಬಸವರಾಜು, ಕೆ.ಎನ್. ಕೃಷ್ಣ, ಮಹದೇವಪ್ಪ ಸೇರಿದಂತೆ ರೈತರು ಇದ್ದರು.