ಮಡಿಕೇರಿ, ಆ. ೨೭: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.೧ರಂದು ಬೆ.೧೦.೩೦ಕ್ಕೆ ನಿಧಿಯ ಶತಮಾನ ಭವನ ಕಟ್ಟಡದಲ್ಲಿ ನಡೆಯಲಿದೆ. ನಿಧಿಯ ಅಧ್ಯಕ್ಷರಾದ ಗೀತಾ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸದಸ್ಯರು ಪಾಲ್ಗೊಳ್ಳುವಂತೆ ಕಾರ್ಯದರ್ಶಿ ಬಿ.ಕೆ. ಜಗದೀಶ್ ಕೋರಿದ್ದಾರೆ.