ಮಡಿಕೇರಿ, ಆ. ೨೬: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯಲಾರಂಭಿಸಿದ್ದು ಮತ್ತೆ ಮುಂಗಾರಿನ ಛಾಯೆ ಕಂಡುಬರುತ್ತಿದೆ. ಬಹುತೇಕ ಎಲ್ಲಾ ಕಡೆಗಳಲ್ಲಿ ಮಳೆಯಾಗುತ್ತಿದ್ದು ಕೆಲವೆಡೆ ರಭಸವೂ ಹೆಚ್ಚಾಗಿವೆ. ಭಾನುವಾರದಂದು ರಾತಿಯಿಡೀ ಮಳೆಯಾಗಿದ್ದು, ಸೋಮವಾರವೂ ಅಲ್ಲಲ್ಲಿ ಮಳೆ ಹೆಚ್ಚಾಗಿತ್ತು. ಕಳೆದ ೨೪ ಗಂಟೆಗಳಲ್ಲಿ ಪೊನ್ನಂಪೇಟೆ ಹೋಬಳಿಯಲ್ಲಿ ೫.೪೪ ಇಂಚಿನಷ್ಟು ಮಳೆ ಸುರಿದಿದ್ದರೆ ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೨.೦೫ ಇಂಚು ಮಳೆಯಾಗಿದೆ. ಜಿಲ್ಲೆಯಲ್ಲಿಯೂ ಸರಾಸರಿ ಒಂದು ಇಂಚಿನಷ್ಟು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧ ಇಂಚು, ವೀರಾಜಪೇಟೆ ೦.೭೦, ಪೊನ್ನಂಪೇಟೆ ೨.೦೫, ಸೋಮವಾರಪೇಟೆ ೦.೭೨ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೩೫ ಇಂಚು ಮಳೆ ದಾಖಲಾಗಿದೆ.

ಭಾಗಮಂಡಲ ಹೋಬಳಿಯಲ್ಲಿ ೨.೩೪ ಇಂಚು, ಮಡಿಕೇರಿ ೧.೧೦, ಹುದಿಕೇರಿ ಹೋಬಳಿಯಲ್ಲಿ ೧.೨೨, ಶಾಂತಳ್ಳಿ ೧.೬೮ ಇಂಚು ಮಳೆಯಾಗಿದೆ.