ಮಡಿಕೇರಿ, ಆ. ೨೭: ಹಣ ದುರುಪಯೋಗದ ಆರೋಪದಡಿ ಮಡಿಕೇರಿ ನಗರಸಭಾ ಸದಸ್ಯರೊಬ್ಬರಿಗೆ ಪ್ರಾದೇಶಿಕ ಆಯುಕ್ತರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಅವರು ಮತ್ತೊಬ್ಬ ಸದಸ್ಯ ಕೆ.ಎಂ. ಅಪ್ಪಣ್ಣ ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ನಗರಸಭಾ ಸದಸ್ಯರಾಗಿದ್ದುಕೊಂಡು ಲಾಭದಾಯಕ ವ್ಯವಹಾರ ಮಾಡಿ ಒಂದೇ ಬಿಲ್ಗೆ ಎರಡೆರಡು ಬಾರಿ ಹಣ ಪಡೆದ ಬಗ್ಗೆ ಆರೋಪಿಸಿ ದ್ದರು. ನ್ಯಾಯಾಲಯವು ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿ ೨ ತಿಂಗಳ ಒಳಗೆ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆ ಯಲ್ಲಿ ಇದೀಗ ಅಪ್ಪಣ್ಣ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿ ಲಿಖಿತ ವಿವರಣೆಯನ್ನು ಪೂರಕ ದಾಖಲೆಗಳೊಂದಿಗೆ ಒದಗಿಸುವಂತೆ ಸೂಚಿಸಿದೆ.