ಮಡಿಕೇರಿ, ಆ. ೨೭: ಕರ್ನಾಟಕ ರಾಜ್ಯ ಗೃಹರಕ್ಷಕಿಯರ ಘಟಕಾಧಿಕಾರಿಗಳ ತರಬೇತಿಯಲ್ಲಿ ಪಾಲ್ಗೊಂಡ ಮಡಿಕೇರಿಯ ಲವಿನಾ ಅವರು ಪರೀಕ್ಷೆಯಲ್ಲಿ ಬೆಳ್ಳಿಯ ಪದಕಕ್ಕೆ ಭಾಜನರಾಗಿದ್ದಾರೆ. ಫಲಿತಾಂಶದಲ್ಲಿ ಕರ್ನಾಟಕದಲ್ಲೇ ದ್ವಿತೀಯ ಸ್ಥಾನ ಪಡೆದಿರುವ ಲವಿನಾ, ಕೊಡಗಿನ ಗೃಹ ರಕ್ಷಕ ದಳದಿಂದ ಪದಕ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲವಿನಾ ಅವರು ಕೊಡಗು ಗೃಹ ರಕ್ಷಕಿಯರ ನೋಡೆಲ್ ಅಧಿಕಾರಿಯಾಗಿ ತಾ.೨೩ ರಂದು, ಹೆಚ್ಚುವರಿ ಎಸ್ಪಿ ಮತ್ತು ಗೃಹ ರಕ್ಷಕ ದಳದ ಕಮಾಂಡೆAಟ್ ಸುಂದರ್ ರಾಜ್ ಅವರಿಂದ ಪ್ರಶಸ್ತಿ ಪತ್ರ ಸ್ವೀಕರಿಸಿದರು.
ಪೊಲೀಸ್ ಡಿಜಿಪಿ ಕಮಲ್ ಪಂತ್ ಅವರ ನಿವೃತ್ತಿ ಪಥಸಂಚಲನ ಗೌರವರಕ್ಷೆ ಕಾರ್ಯಕ್ರಮದಲ್ಲಿ ಲವಿನಾ, ಕೊಡಗಿನ ಏಕೈಕ ಗೃಹ ರಕ್ಷಕಿಯಾಗಿ ರೈಫಲ್ ಪರೇಡ್ನಲ್ಲಿ ಪಾಲ್ಗೊಂಡಿದ್ದರು.