ಕೂಡಿಗೆ, ಆ. ೨೬: ಬೆಂಗಳೂರಿನಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ತಂಡ ರನ್ನರ್ಸ್ ಸ್ಥಾನ ಪಡೆದುಕೊಂಡಿತು.
ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ಜಿಲ್ಲಾ ವಿರುದ್ಧ ಟೈ ಬ್ರೇಕರ್ನಲ್ಲಿ ೫-೪ ಗೋಲುಗಳ ಅಂತರದಿAದ ರನ್ನರ್ ಆಗಿದೆ. ರೋಚಕದಿಂದ ಕೂಡಿದ ಪಂದ್ಯಾಟದಲ್ಲಿ ಎರಡು ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗದ ಕಾರಣ ಪಂದ್ಯಾವಳಿಯನ್ನು ಟೈಬ್ರೇಕರ್ಗೆ ಕೊಂಡೊಯ್ಯಲಾಯಿತು.
ಇದಕ್ಕೂ ಮೊದಲು ನಡೆದ ಪಂದ್ಯಾಟಗಳಲ್ಲಿ ಕೊಡಗು ಜಿಲ್ಲಾ ತಂಡವು ವಿಜಯನಗರ ತಂಡದ ವಿರುದ್ಧ ೨-೦, ಹಾಸನ ವಿರುದ್ಧ ೨-೧, ಕ್ವಾಟರ್ ಫೈನಲ್ನಲ್ಲಿ ಮೈಸೂರು ತಂಡದ ವಿರುದ್ಧ ೪-೦ ಮತ್ತು ಸೆಮಿಫೈನಲ್ನಲ್ಲಿ ತುಮಕೂರು ವಿರುದ್ಧ ೮-೦ ಗೋಲುಗಳಿಂದ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿತು. ಕೊಡಗು ತಂಡದ ಪರ ಮಂಜುನಾಥ್, ತಿಮ್ಮಯ್ಯ, ಗೊದ್ವಿನ್, ಅಶ್ವಥ್, ನಿತಿನ್ ಗೋಲುಗಳಿಸಿದರು. ಪುನೀತ್ ಕುಮಾರ್ ಕೊಡಗು ತಂಡದ ಗೋಲ್ಕೀಪರ್ ಆಗಿ ಆಡಿದರು.