ನಾಪೋಕ್ಲು, ಆ. ೨೬: ಶಿಕ್ಷಣ ಇಲಾಖೆಯ ವತಿಯಿಂದ ನಾಪೋಕ್ಲು ವಲಯ ಮಟ್ಟದ ಪ್ರಾಥಮಿಕ ಹಾಗೂ ಫ್ರೌಢಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿತು. ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಜ್ಞಾನೋದಯ ಶಾಲೆ ಭಾಗಮಂಡಲ ಪ್ರಥಮ, ನಾಪೋಕ್ಲು ಸೇಕ್ರೆಡ್ ಹಾರ್ಟ್ಸ್ ಶಾಲೆ ದ್ವಿತೀಯ. ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಎಕ್ಸೆಲ್ ಶಾಲೆ ನಾಪೋಕ್ಲು ಪ್ರಥಮ, ಜ್ಞಾನೋದಯ ಶಾಲೆ ಭಾಗಮಂಡಲ ದ್ವಿತೀಯ. ಫ್ರೌಢ ಶಾಲಾ ಬಾಲಕಿಯರಲ್ಲಿ ರಾಮ ಟ್ರಸ್ಟ್ ಶಾಲೆ ಪ್ರಥಮ, ಸೇಕ್ರೆಡ್ ಹಾರ್ಟ್ಸ್ ದ್ವಿತೀಯ, ಬಾಲಕರಲ್ಲಿ ರಾಮ ಟ್ರಸ್ಟ್ ಪ್ರಥಮ, ಆಕ್ಸ್ಪರ್ಡ್ ದ್ವಿತೀಯ.
‘ರೋವ್’ ಸಂಸ್ಥೆಯ ಮಾಲೀಕರಾದ ಜಯ ದೇವಯ್ಯನವರು ಉಚಿತವಾಗಿ ಪಂದ್ಯಾಟ ನಡೆಸಲು ಅವಕಾಶ ನೀಡಿದ್ದಲ್ಲದೆ ಪಂದ್ಯಾಟದ ವಿಜೇತರಿಗೆ ಟ್ರೋಫಿಗಳನ್ನು ನೀಡಿ ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಪಂದ್ಯಾಟ ಸಂಚಾಲಕರಾಗಿ ಸೇಕ್ರೆಡ್ ಹಾರ್ಟ್ಸ್ ಶಾಲೆ ಸುನಿಲ್ ಕಾರ್ಯ ನಿರ್ವಹಿಸಿದರು, ಮಾರ್ಗದರ್ಶಕರಾಗಿ ಬ್ಯಾಡ್ಮಿಂಟನ್ ಕೋಚ್ ರಘುರಾಜ್ ನಿರ್ವಹಿಸಿ ರಾಮಟ್ರಸ್ಟ್ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಸರಿತಾ, ಮರ್ಕಸ್ ಶಾಲಾ ದೇವಮಾಜಿ, ಪಾರಾಣೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಂಜು, ನರಿಯಂದಡ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪೊನ್ನಪ್ಪ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.