ಮಡಿಕೇರಿ, ಆ. ೨೭: ಚೇರಂಬಾಣೆ - ತೊಟ್ಲುಕುಂಞೆಯ ಕುಲಾಲ ಸೇವಾ ಸಂಘದ ವತಿಯಿಂದ ಕೈಲ್ಮುಹೂರ್ತ ಹಬ್ಬದ ಪ್ರಯುಕ್ತ ಕುಲಬಾಂಧವರಿಗೆ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಸೆ. ೧ ರಂದು ಸಂಘದ ಆವರಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಪುರುಷರ ವಿಭಾಗದಲ್ಲಿ ತೆಂಗಿನಕಾಯಿಗೆ ಕಲ್ಲು, ಭಾರದ ಗುಂಡು ಎಸೆತ, ಥ್ರೋಬಾಲ್ ಪಾಸಿಂಗ್, ಸ್ತಿçÃಯರಿಗೆ ತೆಂಗಿನಕಾಯಿಗೆ ಕಲ್ಲು, ಭಾರದ ಗುಂಡು ಎಸೆತ, ಥ್ರೋಬಾಲ್ ಪಾಸಿಂಗ್, ನಿಂಬೆ ಚಮಚ ಓಟ, ಮಕ್ಕಳಿಗೆ ಕಾಳು ಹೆಕ್ಕುವುದು, ಮೆಮೊರಿ ಗೇಮ್, ನಿಂಬೆ ಚಮಚ ಓಟ, ಗುಂಪು ಸ್ಪರ್ಧೆಯಾಗಿ ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.