ಕೊಡ್ಲಿಪೇಟೆ, ಆ. ೨೬: ರಾಜ್ಯ ಮಟ್ಟದ ವೈಟ್‌ಲಿಫ್ಟಿಂಗ್ ಚಾಂಪಿಯನ್ಸ್ಶಿಪ್‌ನ ಬಾಲಕಿಯರ ಯೂತ್ ಮತ್ತು ಜೂನಿಯರ್ ವಿಭಾಗದಲ್ಲಿ ಕೊಡ್ಲಿಪೇಟೆಯ ಅಮೃತ ಎಸ್.ಆರ್. ಚಿನ್ನದ ಪದಕಕ್ಕೆ ಭಾಜನಳಾಗಿದ್ದಾಳೆ. ಕರ್ನಾಟಕ ರಾಜ್ಯ ವೈಟ್‌ಲಿಫÀ್ಟರ್ಸ್ ಸಂಸ್ಥೆ ಮತ್ತು ಮೈಸೂರು ವೈಟ್‌ಲಿಫÀ್ಟರ್ಸ್ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರಿನ ಮಹಾಜನ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ಬಾಲಕಿಯರ ಯೂತ್ ಹಾಗೂ ಜೂನಿಯರ್ ವಿಭಾಗದಲ್ಲಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾಳೆ.

ಕೊಡ್ಲಿಪೇಟೆ ನವಗ್ರಾಮದ ನಿವಾಸಿಗಳಾದ ರಮೇಶ್ ಆಚಾರ್ಯ ಮತ್ತು ಕವಿತಾ (ಕೆನರಾ ಬ್ಯಾಂಕ್ ಸಿಬ್ಬಂದಿ) ದಂಪತಿ ಪುತ್ರಿ. ಅಮೃತಾ ಉಜಿರೆ ಎಸ್‌ಡಿಎಮ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.